FIFA World cup: ಮೊರಕ್ಕೊ ವಿರುದ್ಧ ಗೆದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ಕ್ರೋವೇಶಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫಿಫಾ ವಿಶ್ವಕಪ್ ಟೂರ್ನಿ ಫೈನಲ್ ಆರಂಭಕ್ಕೆ ಅತ್ತ ಕತಾರ್ ತಯಾರಿಯಾಗಿದ್ದು,ಚಾಂಪಿಯನ್ ಯಾರು ಆಗುತ್ತಾರೆ ಎಂದು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ.

ಇದರ ನಡುವೆ 3ನೇ ಸ್ಥಾನಕ್ಕಾಗಿ ಮೊರಕ್ಕೊ ಹಾಗೂ ಕ್ರೋವೇಶಿಯಾ ಪೈಪೋಟಿ ನಡೆಡಿದ್ದು,ಕ್ರೋವೇಶಿಯಾ 2-1 ಅಂತರದಲ್ಲಿ ಗೆಲುವು ಸಾಧಿಸಿದೆ.

ಪಂದ್ಯದ ಆರಂಭದಿಂದಲೇ ಕ್ರೋವೇಶಿಯಾ ತಂಡ ಅಕ್ರಮಕಾರಿ ಆಟವಾಡಿ ಮುನ್ನಡೆ ಪಡೆಯಿತು. ಆದ್ರೆ 2ನೇ ನಿಮಿಷಕ್ಕೆ ಮೊರಕ್ಕೊ ಗೋಲು ಸಿಡಿಸಿ 1-1 ಅಂತರದಲ್ಲಿ ಸಮಬಗೊಳಿಸಿದರು. ಬಳಿಕ ಎರಡೂ ತಂಡಗಳು ಆಕ್ರಮಣಕಾರಿ ಜೊತೆಗೆ ಯಾರಿಗೂ ಗೋಲಿಗೆ ಅವಕಾಶ ನೀಡಲಿಲ್ಲ.

42 ನೇ ನಿಮಿಷದಲ್ಲಿ ಮಿಸ್ಲಾವ್ ಒರ್ಸಿಕ್ ಸಿಡಿಸಿದ ಗೋಲು ಕ್ರೋವೇಶಿಯಾ ತಂಡಕ್ಕೆ 2-1 ಅಂತರದ ಮುನ್ನಡೆ ತಂದುಕೊಟ್ಟಿತು.
ಈ ಮೂಲಕ ಮೊರಕ್ಕೊ ಮಣಿಸಿ 3ನೇ ಸ್ಥಾನ ಅಲಂಕರಿಸಿದ ಕ್ರೋವೇಶಿಯಾ ತಂಡಕ್ಕೆ 223 ಕೋಟಿ ರೂಪಾಯಿ(27 ಮಿಲಿಯನ್‌ ಡಾಲರ್‌) ಬಹುಮಾನ ಲಭಿಸಿಸಿದೆ. ಇನ್ನು ಸೋಲು ಅನಭವಿಸುವ ಮೂಲಕ 4ನೇ ಸ್ಥಾನಕ್ಕೆ ತಪ್ತಿಪಟ್ಟುಕೊಂಡು ಮೊರಕ್ಕೊ ತಂಡಕ್ಕೆ 25 ಮಿಲಿಯನ್‌ ಡಾಲರ್‌ (ಅಂದಾಜು 206 ಕೋಟಿ ರು.) ಬಹುಮಾನ ಮೊತ್ತ ಪಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!