SPORTS| ಇಂದು ಫಿಫಾ ವಿಶ್ವಕಪ್ ಫೈನಲ್ ಪಂದ್ಯ: ಫ್ರಾನ್ಸ್ ಮತ್ತು ಅರ್ಜೆಂಟೀನಾ ಮುಖಾಮುಖಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫುಟ್ಬಾಲ್ ಅಭಿಮಾನಿಗಳು ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ಒಂದು ತಿಂಗಳಿಂದ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿ ಅಂತಿಮ ಹಂತ ತಲುಪಿದ್ದು, ಇಂದು ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಕತಾರ್‌ನ ಲುಸೇಲ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ಮುಖಾಮುಖಿಯಾಗಿದ್ದಾರೆ.

ಫ್ರೆಂಚ್ ಆಟಗಾರ ಎಂಬಪ್ಪೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಲಿ ಚಾಂಪಿಯನ್ ಫ್ರಾನ್ಸ್ ಹಾಗೂ ಎರಡು ಬಾರಿಯ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ನಡುವೆ ಇಂದು ಫೈನಲ್ ಪಂದ್ಯ ನಡೆಯುತ್ತಿದ್ದು, ವಿಶ್ವದೆಲ್ಲೆಡೆ ಕಾತರ ಮನೆ ಮಾಡಿದೆ. ಈ ಪಂದ್ಯಕ್ಕೆ ಕತಾರ್‌ನ ಲುಸೈಲ್ ಸ್ಟೇಡಿಯಂ ವೇದಿಕೆಯಾಗಲಿದೆ. ಈ ಟೂರ್ನಿಯಲ್ಲಿ 218 ಚಾಂಪಿಯನ್‌ ರ್ಯಾಂಕ್‌ನಲ್ಲಿರುವ ಅರ್ಜೆಂಟೀನಾ ಮತ್ತು ಫ್ರಾನ್ಸ್‌ ಅತ್ಯುತ್ತಮ ಫಾರ್ಮ್‌ನಲ್ಲಿವೆ. ಇದರೊಂದಿಗೆ ಪಂದ್ಯ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಹೆಚ್ಚಿದೆ.

ಅರ್ಜೆಂಟೀನಾವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ಮತ್ತು ಫುಟ್‌ಬಾಲ್ ಮಾಂತ್ರಿಕ ಮೆಸ್ಸಿ ಮೇಲೆ ತಂಡ ಭರವಸೆಯನ್ನು ಇಟ್ಟುಕೊಂಡಿದೆ. ಅವರ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಮತ್ತೊಮ್ಮೆ ವಿಜೇತರಾಗುವ ಉತ್ಸಾಹದಲ್ಲಿದೆ. ಈ ಪಂದ್ಯದೊಂದಿಗೆ ಮೆಸ್ಸಿ ನಿವೃತ್ತಿ ಘೋಷಿಸುವುದರೊಂದಿಗೆ, ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕುವ ನಿರೀಕ್ಷೆಯಿದೆ.

ಈಗಾಗಲೇ ಹಾಲಿ ಚಾಂಪಿಯನ್ ಆಗಿರುವ ಫ್ರಾನ್ಸ್ ಆತ್ಮವಿಶ್ವಾಸದಿಂದ ಅಖಾಡಕ್ಕಿಳಿಯಲಿದ್ದು, ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ಭರವಸೆಯಲ್ಲಿದೆ. ಆದರೆ ಅಂತಿಮ ಕದನದಲ್ಲಿ ಸ್ಟಾರ್ ಡಿಫೆಂಡರ್ ಗಳಾದ ರಾಫೆಲ್ ವರೆನಾ ಹಾಗೂ ಇಬ್ರಾಹಿಮ ಕೊನಾಟೆ ಅನಾರೋಗ್ಯದಿಂದ ಬಳಲುತ್ತಿರುವುದು ತಂಡವನ್ನು ಕಾಡುತ್ತಿದೆ. ಪ್ರಬಲ ಆಕ್ರಮಣಕಾರಿ ಲೈನ್ ಅಪ್ ಹೊಂದಿರುವ ಫ್ರೆಂಚ್ ತಂಡ ಉತ್ತಮ ದಾಳಿ ನಡೆಸುತ್ತಿದೆ. ಈ ಪಂದ್ಯವನ್ನು ಮೆಸ್ಸಿ ಮತ್ತು ಎಂಬಪ್ಪೆ ನಡುವಿನ ಹೋರಾಟ ಎಂದೂ ಬಣ್ಣಿಸಲಾಗಿದೆ. ಈ ಕದನದಲ್ಲಿ ಇಬ್ಬರು ಸೂಪರ್‌ಸ್ಟಾರ್‌ಗಳು ಮುಖಾಮುಖಿಯಾಗಲು ಸಿದ್ಧರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!