ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಮಿಳುನಾಡಿನಲ್ಲಿ ಹಿಂದು ಜನಸಂಖ್ಯೆ ಬೆಳವಣಿಗೆ ದರಕ್ಕೆ ಐದನೇ ಸ್ಥಾನ, ಮೊದಲ್ಯಾರು ಗೊತ್ತೇ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇಂದ್ರ ಗೃಹ ಸಚಿವಾಲಯವು ಲೋಕಸಭೆಯಲ್ಲಿ ನೀಡಿರುವ ಪ್ರತಿಕ್ರಿಯೆ ಪ್ರಕಾರ ತಮಿಳುನಾಡಿನಲ್ಲಿ ತಾವು ಯಾವ ಧರ್ಮಕ್ಕೂ ‘ಸೇರಿಲ್ಲ’ ಎನ್ನುವವರ ಸಂಖ್ಯೆಯೇ ಹೆಚ್ಚಿದೆ.

ಹೌದು, 2001ರಿಂದ 2011 ಅವಧಿಯ ದಶಕದ ಜನಸಂಖ್ಯಾ ಬೆಳವಣಿಗೆಯಲ್ಲಿ ತಾವು ಯಾವ ಧರ್ಮಕ್ಕೂ ಸೇರಿಲ್ಲ ಎಂದು ಗುರುತಿಸಿಕೊಂಡವರ ಸಂಖ್ಯೆ ಮೊದಲ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಮುಸ್ಲಿಮರಿದ್ದು, ಐದನೇ ಸ್ಥಾನದಲ್ಲಿ ಹಿಂದೂಗಳಿದ್ದಾರೆ.

  • ಗ್ರೋತ್ ರೇಟ್ ಹೀಗಿದೆ..
  • 2001 ರ ಸೆನ್ಸಸ್‌ನಲ್ಲಿ ಯಾವ ಧರ್ಮದವರೂ ಅಲ್ಲ ಎಂದು ಗುರುತಿಸಿಕೊಂಡವರ ಸಂಖ್ಯೆ 59,344, 2011 ರ ಸೆನ್ಸಸ್ ವೇಳೆ ಈ ಅನ್‌ನೋನ್ ಧರ್ಮದ ಸಂಖ್ಯೆ1,88,586 ಆಗಿದೆ.  ಅಂದರೆ ಶೇ.217.78 ರಷ್ಟು ಹೆಚ್ಚಳ ಕಂಡಿದೆ.
  • ಅಂತೆಯೇ 2001ರಲ್ಲಿ 5,393 ಇದ್ದ ಬುದ್ಧಿಸ್ಟ್ ಸಂಖ್ಯೆ 2011 ರ ವೇಳೆಗೆ 11,186 ಆಗಿದೆ. ಅಂದರೆ ಶೇ.107ರಷ್ಟು ಹೆಚ್ಚಳ ಕಂಡಿದೆ.
  • 2001 ರಲ್ಲಿ ಸಿಖ್ ಕಮ್ಯುನಿಟಿಯಲ್ಲಿ 9,585 ಮಂದಿ ಇದ್ದು, 2011ರ ವೇಳೆಗೆ 1,601 ಅಂದರೆ ಶೇ.52.97 ರಷ್ಟು ಹೆಚ್ಚಳ ಕಂಡಿದೆ.
  • ಮುಸ್ಲಿಮರ ಸಂಖ್ಯೆ 2001ರ ಸೆನ್ಸಸ್‌ನಲ್ಲಿ 34,70,647 ಇದ್ದು,2011 ರ ಸೆನ್ಸಸ್ ವೇಳಗೆ 42,29,479 ರಷ್ಟು ಹೆಚ್ಚಾಗಿದೆ. ಅಂದರೆ ಶೇ.21.86  ರಷ್ಟು ಹೆಚ್ಚಳ ಕಂಡಿದೆ.
  • ಕ್ರಿಶ್ಚಿಯನ್ನರ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದ್ದು, 2001 ರಲ್ಲಿ 37,85,060 ಇದ್ದ ಸಂಖ್ಯೆ, 2011ಕ್ಕೆ 44,18,331 ಆಗಿದೆ .ಅಂದರೆ ಶೇ.16.73 ರಷ್ಟು ಹೆಚ್ಚಳ ಕಂಡಿದೆ.
  • ಹಿಂದೂಗಳ ಸಂಖ್ಯೆ ಐದನೇ ಸ್ಥಾನದಲ್ಲಿದ್ದು, 2001 ರ ಸೆನ್ಸಸ್ ವೇಳೆ 5,49,85,079 ಇದ್ದ ಸಂಖ್ಯೆ 2011ಕ್ಕೆ 6,31,88,168 ಆಗಿದೆ. ಅಂದರೆ ಶೇ.14.92 ರಷ್ಟು ಹೆಚ್ಚಳ ಕಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss