ಮಂಗಳೂರು ಜೈಲಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ

ಹೊಸದಿಗಂತ ವರದಿ,ಮಂಗಳೂರು:

ನಗರದ ಕೊಡಿಯಾಲ್ ಬೈಲ್ ನ ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ಮೇಲೆ ಸಹ ಕೈದಿಗಳು ಸೋಮವಾರ ಹಲ್ಲೆ ನಡೆಸಿದ್ದಾರೆ.
ಉಳ್ಳಾಲ ನಿವಾಸಿಗಳಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಮಹಮ್ಮದ್ ಸಮೀರ್(33) ಮತ್ತು ಬೋಳಿಯಾರ್ ನಿವಾಸಿ ಮೊಹಮ್ಮದ್ ಮನ್ಸೂರ್ ಆಲಿಯಾಸ್ ಬೋಳಿಯಾರ್ ಮನ್ಸೂರ್(30) ಹಲ್ಲೆಯಿಂದ ಗಾಯಗೊಂಡವರು. ಇವರು ಉಳ್ಳಾಲ ಠಾಣೆಯ ಪ್ರಕರಣವೊಂದಕ್ಕೆ ಸಂಬಂಧಿಸಿ 20 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರು.

ವಿರೋಧಿ ಗ್ಯಾಂಗ್ ಆಗಿರುವ ಟೋಪಿ ನೌಫಾಲ್ ಗ್ಯಾಂಗ್ ಈ ದಾಳಿ ನಡೆಸಿದೆ.‌ ಟೋಪಿ ನೌಫಾಲ್, ಮುಹಮ್ಮದ್ ರಿಫಾತ್, ಇಬ್ರಾಹಿಂ ಖಲೀಲ್ , ಉಮರ್ ಫಾರೂಕ್, ಇರ್ಫಾನ್, ಅಲ್ತಾಫ್, ಜೈನುದೀನ್ ಮತ್ತು ಇತರರು‌ ಹಲ್ಲೆ ನಡೆಸಿದ್ದಾರೆ.
ಅಡುಗೆ ಮನೆಯ ಹರಿತ ಸಲಕರಣೆಗಳಿಂದ ಸಂಜೆ 6.30 ರ ಸುಮಾರಿಗೆ ಹಲ್ಲೆ ನಡೆಸಲಾಗಿದ್ದು ಇಬ್ಬರು ಕೈದಿಗಳ ತಲೆ ಮತ್ತು ಇತರ ಭಾಗಗಳಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ಗ್ಯಾಂಗ್‌ನವರು ಕೂಡ ಹಲವು ಪ್ರಕರಣಗಳಿಗೆ ಸಂಬಂಧಿಸಿ‌ ನ್ಯಾಯಾಂಗ ಬಂಧನದಲ್ಲಿದ್ದರು. ಇವರು ರೌಡಿಶೀಟರ್ ಗಳು ಕೂಡ ಆಗಿದ್ದಾರೆ. ಘಟನೆಯ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಕಾರಾಗೃಹ ಅಧಿಕಾರಿಗಳು ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ
ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!