ರಣರಂಗವಾದ ಊರು: ಮಚ್ಚು, ಕೊಡಲಿ, ದೊಣ್ಣೆಗಳಿಂದ ಎರಡು ಬಣಗಳ ನಡುವೆ ಮಾರಾಮಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದ ಮೇದಕ್ ಜಿಲ್ಲೆಯ ಶಿವಂಪೇಟೆ ಮಂಡಲದ ಕೊತ್ತಪೇಟ ಗ್ರಾಮ ಅಕ್ಷರಶಂ ರಣರಂಗವಾಗಿದೆ. ಜಮೀನು ವಿವಾದದ ಹಿನ್ನೆಲೆ ಎರಡು ಗುಂಪುಗಳ ನಡುವೆ ತೀವ್ರ ಘರ್ಷಣೆ ನಡೆದಿದೆ. ಎರಡೂ ಗುಂಪುಗಳು ಖಾರದ ಪುಡಿ, ಮಚ್ಚು, ಕೊಡಲಿ, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.

ಕೆಲ ದಿನಗಳಿಂದ ಸಹೋದರರಾದ ಸತ್ಯಂ, ಭಿಕ್ಷಾಪತಿ ಹಾಗೂ ಶಿವರಾಂ ನಡುವೆ 20 ಎಕರೆ ಜಮೀನಿಗೆ ಸಂಬಂಧಿಸಿದಂತೆ ಜಮೀನು ವಿವಾದ ನಡೆಯುತ್ತಿತ್ತು. ಸೋಮವಾರ ಭತ್ತ ಕಟಾವಿಗೆ ಬಂದ ರೈತ ಶಿವರಾಮ್ ಅವರನ್ನು ಉಳಿದ ಸಹೋದರರು ತಡೆದಿದ್ದಾರೆ.

ಈ ವೇಳೆ ಸಹೋದರರ ನಡುವೆ ತೀವ್ರ ವಾಗ್ವಾದ ನಡೆದಿದೆ. ಘರ್ಷಣೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಶೇಖರ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಸಂತ್ರಸ್ತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪರಸ್ಪರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!