ಬಸ್​ನಲ್ಲಿ ವಿಂಡೋ ಸೀಟ್​ಗಾಗಿ ಯುವಕರ ಮಧ್ಯೆ ಗಲಾಟೆ, ಚಾಕು ಇರಿತ

ಬೆಳಗಾವಿಯ ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಬಿಟಿಗೆ ಬರುತ್ತಿದ್ದ ಬಸ್​ನಲ್ಲಿ ಕಿಟಕಿ ಪಕ್ಕದ ಸೀಟ್​ಗಾಗಿ ಯುವಕರ ಮಧ್ಯೆ ಗಲಾಟೆ ನಡೆದಿದ್ದು, ಓರ್ವ ಯುವಕನಿಗೆ ಚಾಕು ಇರಿಯಲಾಗಿದೆ.

ಗ್ರಾಮದ ಮಜ್ಜು ಸನದಿ(20) ಎಂಬ ಯುವಕ ಎದೆ ಭಾಗಕ್ಕೆ ಯುವಕರ ಗ್ಯಾಂಗ್​ ಒಂದು ಚಾಕು ಇರಿದು ಪರಾರಿ ಆಗಿದೆ. ಬೆಳಗಾವಿ ಬಿಮ್ಸ್​ ಆಸ್ಪತ್ರೆ ಐಸಿಯುನಲ್ಲಿ ಮಜ್ಜುಗೆ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್​ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!