ಹೊಸದಿಗಂತ ವರದಿ,ಕಲಘಟಗಿ:
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಯುವಜನ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಸನಾತನ ಹಿಂದೂ ಧರ್ಮ ನಿಂದನೆ ಮಾಡಿರುವ ಕುರಿತು ದೂರು ದಾಖಲಾಗಿದೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಮದ ಅಶೋಕ ಬಸಪ್ಪ ತಿಪ್ಪಣ್ಣವರ ಎಂಬುವವರು ನ್ಯಾಯಾಲಯದ ಮುಖಾಂತರ ಪೊಲೀಸ್ ಠಾಣೆಯಲ್ಲಿ ತಮ್ಮ ದೂರನ್ನು ದಾಖಲಿಸಿದ್ದಾರೆ.
ಸನಾತನ ಹಿಂದೂ ಧರ್ಮಕ್ಕೆ ಅವಮಾನ ಮಾಡಿರುವ ಉದಯನಿಧಿ ಸ್ಟಾಲಿನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಅಶೋಕ ಬಸಪ್ಪ ತಿಪ್ಪಣ್ಣವರ ನ್ಯಾಯಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಶೋಕ ತಿಪ್ಪಣ್ಣವರ ಪರವಾಗಿ ವಕೀಲ ಕೆ.ಬಿ.ಗುಡಿಹಾಳ ಅವರು ವಾದ ಮಂಡಿಸಿದ್ದರು.