ಹೊಸ ದಿಗಂತ ವರದಿ, ಕಲಬುರಗಿ:
ನೀರು ತುಂಬಿರುವ ತಗ್ಗು ಗುಂಡಿಯೊಳಗೆ,ಈಜಾಡುವುದಕ್ಕೆ ಇಳಿದ ಮೂವರು ಬಾಲಕರ ದುಮ೯ರಣವಾದ ಘಟನೆ ನಡೆದಿದೆ.
ನಗರದ ಮಹಾಲಕ್ಷ್ಮಿ ಲೇಔಟ್, ನಲ್ಲಿ ಈ ದುರಂತ ಸಂಭವಿಸಿದ್ದು, ದಶ೯ನ (12),ಪ್ರಶಾಂತ್ (10), ಹಾಗೂ ವಿಘ್ನೇಶ್ (9) ಸೇರಿದಂತೆ ಮೂವರ ಬಾಲಕರೇ ಸಾವಿಗೆ ತುತ್ತಾಗಿದ್ದಾರೆ.
ಮನೆ ಕಟ್ಟುವುದಕ್ಕೆ ಕಾಲಮ್ ಹಾಕಿ, ತಗ್ಗು ತೋಡಲಾಗಿತ್ತು. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ಬಹುತೇಕ ತಗ್ಗು,ಗುಂಡಿಗಳು ನೀರಿನಿಂದ ತುಂಬಿ ಹೋದ ಪರಿಣಾಮ ಈ ಘಟನೆ ಜರುಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂ ರಾಘವೇಂದ್ರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.