spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರಚಾರಕ್ಕೆ ಚೀಪ್ ಗಿಮಿಕ್ಸ್ ಮಾಡಿದ ‘ಗೋವಿಂದ ಗೋವಿಂದ’ ತಂಡ: ಕವಿತಾ ಗೌಡ ಮೇಲೆ ಜನ ಸಿಟ್ಟಾಗಿರೋದ್ಯಾಕೆ?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾಗಳ ಪ್ರಚಾರ ಆರಂಭವಾಗ್ತಿದ್ದಂತೆ, ನಟ-ನಟಿಯರು ವಿಧವಿಧವಾಗಿ ಪ್ರಚಾರ ನಡೆಸೋದಕ್ಕೆ ಆರಂಭಿಸ್ತಾರೆ. ಕೆಲವರು ಶಾಲೆ, ಕಾಲೇಜುಗಳಿಗೆ ತೆರಳಿದ್ರೆ ಇನ್ನೂ ಹಲವರು ಓಪನ್ ಜೀಪ್‌ನಲ್ಲಿ ಕುಳಿತು ಜನರತ್ತ ಕೈ ಬೀಸಿ ಆಕರ್ಷಿಸುತ್ತಾರೆ.
ಆದರೆ ಕನ್ನಡದ ನಟಿಯೊಬ್ಬರು ಹಾಗೂ ಸಿನಿಮಾ ತಂಡ ಮಾಡಿದ ಚೀಪ್ ಟ್ರಿಕ್ಸ್ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಗೋವಿಂದ ಗೋವಿಂದ’ ಸಿನಿಮಾ ಪ್ರಚಾರಕ್ಕಾಗಿ ಕವಿತಾ ಗೌಡ ಕಿಡ್ನಾಪ್ ಆಗಿದ್ದಾರೆ ಅನ್ನೋ ರೀತಿ ವಿಡಿಯೋ ಎಲ್ಲೆಡೆ ಹರಿದಾಡಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕವಿತಾ ಅವರ ಬಳಿ ಸೆಲ್ಫಿ ಕೇಳುತ್ತಾರೆ. ಅದಕ್ಕೆ ಪೋಸ್ ಕೊಟ್ಟ ನಂತರ ಕವಿತಾ ಅವರನ್ನು ವ್ಯಾನ್‌ನಲ್ಲಿ ಕೂರಿಸಿಕೊಂಡು ಕಿಡ್ನಾಪ್ ಮಾಡಲಾಗುತ್ತದೆ. ಇದೆಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಕೆಲಕಾಲ ಇದೇ ನಿಜ ಎಂದು ಜನರನ್ನು ನಂಬಿಸಲಾಗಿತ್ತು.
ಆದರೆ ಸಿನಿಮಾದಲ್ಲಿಯೂ ಕವಿತಾ ಗೌಡ ಕಿಡ್ನಾಪ್ ಆಗ್ತಾರೆ ಅನ್ನೋ ರೀತಿ ತೋರಿಸೋದಕ್ಕೆ ಸಿನಿಮಾ ತಂಡ ಈ ರೀತಿ ಟ್ರಿಕ್ಸ್ ಮಾಡಿ ಪೇಚಿಗೆ ಸಿಲುಕಿದೆ.
ಕವಿತಾ ಕಿಡ್ನಾಪ್ ಆಗಿದ್ದಕ್ಕೆ ಗಾಬರಿಯಾಗಿ ಅಯ್ಯೋ ಪಾಪ ಅಂತಿದ್ದ ಜನ ಇಂಥ ಟ್ರಿಕ್ಸ್ ಬಳಸಿ ಜನರಿಗೆ ಯಾಮಾರಿಸಿದ್ದಕ್ಕೆ ಬೈದುಕೊಳ್ತಿದ್ದಾರೆ!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss