BIG NEWS | ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ : ಆಪ್ ಮೂಲಕ ಬಜೆಟ್ ವೀಕ್ಷಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು 2023-24ನೇ ಸಾಲಿನ ಕೇಂದ್ರ ಸಮಾನ್ಯ ಬಜೆಟ್‌ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಇಡೀ ವಿಶ್ವವೇ ಬಜೆಟ್ ಎದುರು ನೋಡುತ್ತಿದೆ, ಎಲ್ಲ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ನಡೆಸುವ ಬಜೆಟ್ ಇದಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಕಳೆದ ವರ್ಷದ ಆರ್ಥಿಕತೆ, ಮುಂದಿನ ವರ್ಷದ ಲೆಕ್ಕಾಚಾರ, ಯಾವ ಕ್ಷೇತ್ರಗಳಿಗೆ ಎಷ್ಟು ಅನುದಾನ, ಸರ್ಕಾರದ ಯಾವ ಯೋಜನೆಗಳಿಗೆ ಎಷ್ಟು ಅನುದಾನ, ಹೊಸ ಯೋಜನೆಗಳಾವುದು, ತೆರಿಗೆ ಎಷ್ಟು ಎನ್ನುವ ಮಾಹಿತಿ ವಾರ್ಷಿಕ ಬಜೆಟ್‌ಲ್ಲಿ ತಿಳಿಯಲಿದೆ.

ವಿತ್ತ ಸಚಿವೆಯಾಗಿ ಇಂದು ನಿರ್ಮಲಾ ಸೀತಾರಾಮನ್ ಅವರು ಐದನೇ ಬಾರಿಗೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಬಗ್ಗೆ ಕ್ಷಣಕ್ಷಣದ ಮಾಹಿತಿ, ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಬಜೆಟ್ ಮೊಬೈಲ್ ಆಪ್ ಮೂಲಕ ವೀಕ್ಷಿಸಬಹುದಾಗಿದೆ. ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗೆ ಯೂನಿಯನ್ ಬಜೆಟ್ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿ, ಸರಳವಾದ ಬಜೆಟ್ ವಿವರಗಳನ್ನು ಪಡೆಯಬಹುದಾಗಿದೆ. ಲೋಕಸಭಾ ಟಿವಿ, ರಾಜ್ಯಸಭಾ ಟಿವಿ ಹಾಗೂ ದೂರದರ್ಶನ ನ್ಯೂಸ್‌ನಲ್ಲಿ ಬಜೆಟ್ ಮಂಡನೆ ವೀಕ್ಷಿಸಬಹುದು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಇದಾಗಿರಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಸಂಸತ್‌ನಲ್ಲಿ ಬಜೆಟ್ ಆರಂಭವಾಗಲಿದೆ. ಕಳೆದ ವರ್ಷ 1 ಗಂಟೆ 50 ನಿಮಿಷ ಬಜೆಟ್ ಮಂಡನೆ ಮಾಡಿದ್ದರು. 2021 ರಲ್ಲಿ 2 ಗಂಟೆ 40 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡಿದ್ದರು, ಇದು ಇತಿಹಾಸದಲ್ಲೇ ಸುದೀರ್ಘ ಬಜೆಟ್ ಎಂದು ಪರಿಗಣಿಸಲ್ಪಟ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!