ಆರ್ಥಿಕ ಸಂಕಷ್ಟ: ಸಾಲ ಪಾವತಿಸದೆ ಹೈ ರಿಸ್ಕ್ ಪಟ್ಟಿ ಸೇರಿದ ಸ್ಪೈಸ್ ಜೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ಸ್ಪೈಸ್ ಜೆಟ್‌ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ವಿಮಾನಯಾನ ಸಂಸ್ಥೆಗೆ ನೀಡಲಾಗಿರುವ ಸಾಲವನ್ನು ನಿಗದಿತ ಸಮಯಕ್ಕೆ ಪಾವತಿಸದ ಹಿನ್ನೆಲೆ ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ಹಾಗೂ ಖಾಸಗಿ ಸಾಲದಾತ ಬ್ಯಾಂಕ್‌ಗಳಾದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಹೆಚ್ಚು ಅಪಾಯದ ವರ್ಗದಲ್ಲಿರಿಸಿರುವುದಾಗಿ (ಹೈ ರಿಸ್ಕ್) ಮೂಲಗಳು ತಿಳಿಸಿವೆ.

ಸ್ಪೈಸ್ ಜೆಟ್‌ನ ನಗದು ಹರಿವಿನ ಬಗ್ಗೆ ಸಾಲದಾತ ಬ್ಯಾಂಕ್‌ಗಳು ಕಳವಳ ವ್ಯಕ್ತಪಡಿಸಿದ್ದು, ಕೆಲ ವಿಮಾನಯಾನ ಸಂಸ್ಥೆಗಳು ಬ್ಯಾಂಕ್‌ಗಳಿಗೆ ಪಾವತಿಸುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಸ್ಪೈಸ್ ಜೆಟ್‌ನೊಂದಿಗೆ ಮಾತುಕತೆ ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!