ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಣ್ಮಕ್ಕಳು ಮಾತಾಡೋದು ಸ್ವಲ್ಪ ಜಾಸ್ತಿನೇ..! ಸಿಕ್ಕಾಪಟೆ ಮಾತನಾಡುವ ಮೊದಲು ಈ ಬಗ್ಗೆ ತಿಳಿದುಕೊಳ್ಳಿ..

ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸ್ವಲ್ಪ ಜಾಸ್ತಿಯೇ ಮಾತಾಡುತ್ತಾರೆ. ಅದರಲ್ಲೂ ತಮ್ಮದೇ ವಯಸ್ಸಿನವರು ಸಿಕ್ಕರಂತೂ ಮುಗಿಯಿತು. ಮಾತಿನ ಅರಮನೆ ಕಟ್ಟುತ್ತಾರೆ. ಕೆಲವರಿಗಂತೂ ಮಾತುಗಳೇ ಅವರ ವೀಕನೆಸ್ಸ್ ಆಗಿರುತ್ತದೆ. ಮಾತನಾಡುವುದು ಒಳ್ಳೆಯದೇ ಆದರೆ ಲಿಮಿಟ್ ತಪ್ಪಿ ಮಾತನಾಡುವುದು ಒಳ್ಳೆಯದಲ್ಲ. ಮಾತನಾಡುವ ಮೊದಲು ಈ ಬಗ್ಗೆ ತಿಳಿದುಕೊಳ್ಳಿ…

  • ಮಾತನಾಡುವ ಮೊದಲು ಈ ವಿಷಯ ನಿಮಗೆ ಸಂಬಂಧಿಸಿದ್ದಾ, ನೀವು ಮಾತನಾಡುವ ಅವಶ್ಯಕತೆ ಇದೆಯೇ ಎಂಬುದನ್ನು ನಿಮಗೇ ನೀವೇ ಪ್ರಶ್ನೆ ಮಾಡಿಕೊಂಡು ಮಾತನ್ನು ಆರಂಭಿಸಿ.
  • ಸರಿಯಾಗಿ ಗೊತ್ತಿಲ್ಲದಿದ್ದರೆ, ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಲು ಹೋಗಬೇಡಿ.
  • ನೀವು ಮಾತನಾಡುತ್ತಿರುವ ಜಾಗದಲ್ಲಿ ನಿಮಗೆ ಗೌರವ, ನಿಮ್ಮ ಮಾತಿಗ ಮನ್ನಣೆ ಸಿಗುತ್ತಿದೆ ಎಂದಾದರೆ ಮಾತ್ರ ಮಾತನಾಡಿ. ನಿಮ್ಮಗೆ ಗೌರವ ಸಿಗುತ್ತಿಲ್ಲ ಎಂದಾದರೆ ನಿಮ್ಮ ಮಾತಿಗೂ ಬೆಲೆ ಸಿಗುವುದಿಲ್ಲ.
  • ಮಾತನಾಡುವಾಗ ಎದುರಿಗಿನವರ ಕಣ್ಣನ್ನು ನೋಡುತ್ತಾ ಮಾತನಾಡಿ. ಬೇರೆಡೆಗೆ ನೋಡುತ್ತಾ ಮಾತನಾಡಿದರೆ ನಿಮ್ಮ ಮಾತಿನ ಮೇಲೆ ನಿಮಗೆ ಕಾನ್ಫಿಡೆನ್ಸ್ ಇಲ್ಲ ಎಂದರ್ಥ
  • ಮುಂದಿನವರು ಮಾನಾಡುತ್ತಿದ್ದಾರೆಂದರೆ ಅವರ ಮಾತುಗಳನ್ನು ಕೇಳಿಸಿಕೊಳ್ಳುವ ಸಹನೆ ಇರಲಿ. ಮಧ್ಯದಲ್ಲಿ ಮಾತನಾಡಬೇಡಿ.
  • ನೀವು ಮಾತನಾಡುವಾಗ ಕೇಳಿಸಿಕೊಳ್ಳುತ್ತಿರುವವರ ಮುಖದ ಭಾವ ಗಮನಿಸುತ್ತಿರಿ. ಅವರಲ್ಲಿ ನಿಮ್ಮ ಮಾತು ಕೇಳಿಸಿಕೊಳ್ಳುವ ಆಸಕ್ತಿ ಇಲ್ಲ ಎಂಬುದು ತಿಳಿಯುತ್ತಿದ್ದಂತಯೇ ಮಾತನ್ನು ಮುಗಿಸಿ.
  • ನೀವು ಬಹಳ ಮಾತನಾಡುತ್ತೀರಾ ಎಂದಾದರೆ ಇವತ್ತಿನಿಂದಲೇ ಸ್ವಲ್ಪ ಸ್ವಲ್ಪವಾಗಿ ಕಡಿಮೆ ಮಾಡುತ್ತಾ ಬನ್ನಿ. ಬಹಳ ಮಾತನಾಡುವವರಿಗಿಂತ ಮಾತನಾಡದೇ ಇರುವವರಿಗೆ ಬೆಲೆ ಜಾಸ್ತಿ.
  • ನೀವು ಆಡುವ ಮಾತುಗಳು ಬೇರೆಯವರನ್ನು ನೋಯಿಸುವಂತೆ ಇರಬಾರದು.
  • ನಿಮ್ಮ ಮಾತುಗಳು ಬೇರೆಯವರ ಟೀಕೆ, ನಿಂದನೆಯಿಂದ ಕೂಡಿರಕೂಡದು.
  • ಮಾತನಾಡುವಾಗ ಮುಖ ಗಂಟಿಕ್ಕಿಕೊಂಡು ಮಾತನಾಡಬೇಡಿ. ಮಾತು ತಿಳಿ ಹಾಸ್ಯದಿಂದ ಕೂಡಿದ್ದು, ಸ್ನೇಹ ಪೂರ್ವಕವಾಗಿರಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss