ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತ್ಯುತ್ತಮ ರೆಸ್ಟೋರೆಂಟ್‌ಗಳ ಪಟ್ಟಿ ಹೊರಬಿದ್ದಿದೆ. ಅದರಲ್ಲಿ ಭಾರತದ ರೆಸ್ಟೋರೆಂಟ್‌ಗೂ ಸ್ಥಾನ ಸಿಕ್ಕಿದ್ದು, ಟಾಪ್ 50ರ ಪಟ್ಟಿಯಲ್ಲಿ ಈ ರೆಸ್ಟೋರೆಂಟ್ ಕೂಡ ಮಿಂಚುತ್ತಿದೆ.
ಆಗ್ರಾದ ಒಬೆರಾಯ್ ಅಮರವಿಲಾಸ್ 45ನೇ ಸ್ಥಾನವನ್ನು ಪಡೆದುಕೊಂಡಿದೆ. ಸಂಪೂರ್ಣ ಪಟ್ಟಿಯಲ್ಲಿ ಯುರೋಪ್ ಮತ್ತು ಏಷ್ಯಾದ ಹೋಟೆಲ್‌ಗಳು ಮೊದಲ ಸ್ಥಾನದಲ್ಲಿವೆ. ಇಟಲಿಯಲ್ಲಿ ಲೇಕ್ ಕೊಮೊದಲ್ಲಿ 18 ನೇ ಶತಮಾನದ ವಿಲ್ಲಾ ಪಸಲಾಕ್ವಾ ಅತ್ಯುತ್ತಮ ಹೋಟೆಲ್ ಎಂದು ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಏಳು ಎಕರೆಗಳ ತಾರಸಿ ತೋಟಗಳ ಮಧ್ಯೆ ಇರುವ ವಿಲ್ಲಾ ಹೋಟೆಲ್ ಎಲ್ಲರನ್ನೂ ಆಕರ್ಷಿಸುತ್ತದೆ. ‘ವಿಶ್ವದ 50 ಅತ್ಯುತ್ತಮ ಹೋಟೆಲ್‌ಗಳಿಗೆ ಶ್ರೇಯಾಂಕ ನೀಡಲು 580 ಸದಸ್ಯರ ಸಮಿತಿ ಸಲ್ಲಿಸಿದ ನಾಮನಿರ್ದೇಶನಗಳನ್ನು ಪರಿಗಣಿಸಲಾಗಿದೆ. ಪ್ಯಾನೆಲ್ ಪ್ರವಾಸಿ ಪತ್ರಕರ್ತರು ಮತ್ತು ಅನುಭವಿ ಹೋಟೆಲ್ ಉದ್ಯಮಿಗಳನ್ನು ಒಳಗೊಂಡಿದೆ.
ಇಟಲಿಯ ಪಸಲಾಕ್ವಾ ಹೋಟೆಲ್ ಅಗ್ರಸ್ಥಾನದಲ್ಲಿದೆ. ಹಾಂಕಾಂಗ್‌ನ ರೋಸ್‌ವುಡ್ ಹಾಂಗ್ ಕಾಂಗ್, ಥೈಲ್ಯಾಂಡ್‌ನ ಫೋರ್ ಸೀಸನ್ ಬ್ಯಾಂಕಾಕ್, ಹಾಂಗ್ ಕಾಂಗ್‌ನ ಅಪ್ಪರ್ ಹೌಸ್, ಜಪಾನ್‌ನ ಅಮನ್ ಟೋಕಿಯೊ ಹೀಗೆ ಹಲವು ರೆಸ್ಟೋರೆಂಟ್‌ಗಳು ಸ್ಥಾನ ಗಿಟ್ಟಿಸಿಕೊಂಡಿವೆ.
The ultimate bucket list for unlocking luxury travel: https://t.co/NZqseaA7Z1 #Worlds50BestHotels #50BestHotels pic.twitter.com/Rp2Lm6mgiO
— 50 Best Hotels (@50Best_Hotels) September 20, 2023