ಮೃತಪಟ್ಟಿದೆ ಎಂದು ಸಮಾಧಿ ಮಾಡಿ ಬಳಿಕ ಅಗೆದಾಗ ಮಗು ಜೀವಂತವಾಗಿರುವುದು ಪತ್ತೆ!

ಹೊಸದಿಗಂತ ಜಿಜಿಟಲ್‌ ಡೆಸ್ಕ್‌:

ನವಜಾತ ಶಿಶು ಮೃತಪಟ್ಟಿದೆ ಎಂದು ಸಮಾಧಿ ಮಾಡಿ ಒಂದು ಗಂಟೆ ಬಳಿಕ ಒತ್ತಾಯಪೂರ್ವಕವಾಗಿ ಸಮಾಧಿಯನ್ನು ತೋಡಿದಾಗ ಜೀವಂತವಾಗಿದ್ದ ಘಟನೆ ಜಮ್ಮು ಮತ್ತು ಕಾಶ್ಮೀರದ ಬನ್ನಿಹಾಳ್‌ನಲ್ಲಿ ನಡೆದಿದೆ.
ಸೋಮವಾರ ಇಲ್ಲಿನ ಸರ್ಕಾರಿ ಉಪ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವನ್ನು ಹುಟ್ಟಿದ ಕೂಡಲೇ ಮೃತಪಟ್ಟಿದೆ ಎಂದು ಘೋಷಿಸಲಾಗಿತ್ತು. ಬಳಿಕ, ಮಗುವನ್ನು ಹತ್ತಿರದ ಹಳ್ಳಿಯ ಸ್ಮಶಾನದಲ್ಲಿ ಮಣ್ಣು ಮಾಡಲಾಯಿತು. ಆದರೆಗ್ರಾಮದ ಸ್ಥಳೀಯರು ಮೃತದೇಹವನ್ನು ಹೊರತೆಗೆದು ನಮ್ಮೂರಿನಲ್ಲೇ ಸಮಾಧಿ ಮಾಡುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ, ಸಮಾಧಿಯನ್ನು ಮತ್ತೆ ಅಗೆದು ಮಗುವಿನ ದೇಹವನ್ನು ಹೊರತೆಗೆಯಲಾಯಿತು. ಈ ವೇಳೆ ಮಗು ಜೀವಂತವಾಗಿರುವುದನ್ನು ಕಂಡು ಕುಂಟುಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ.
ಇತ್ತ ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಮಗುವಿನ ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆಕ್ರೋಶಕ್ಕೆ ಮಣಿದ ಆಡಳಿತ ಮಂಡಳಿ, ಹೆರಿಗೆ ವಾರ್ಡ್‌ನ ಇಬ್ಬರು ನೌಕರರನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಲಾಗಿದೆ.
ಬಶ್ರತ್‌ ಅಹ್ಮದ್ ಗುಜ್ಜಾರ್ ಮತ್ತು ಶಮೀನಾ ಬೇಗಂ ಎಂಬುವವರಿಗೆ ಜನಿಸಿದ ಮಗು ಇದಾಗಿತ್ತು ಎಂದು ಸರ್ಪಂಚ್ ಮನ್ಸೂರ್ ವಾನಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!