ಬಿಜೆಪಿ ಅಭ್ಯರ್ಥಿ ಅರುಣ್​ಕುಮಾರ್ ಪೂಜಾರ್ ವಿರುದ್ಧ ಎಫ್ಐಆರ್ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್​​ಕುಮಾರ್ ಪೂಜಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನೀತಿ ಸಂಹಿತಿ ಉಲ್ಲಂಘನೆ ಆರೋಪದಡಿ ರಾಣೆಬೆನ್ನೂರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅನುಮತಿ ಪಡೆಯದೆ ರಾಣೆಬೆನ್ನೂರ ಗಂಗಾಜಲ ತಾಂಡಾ ಬಳಿಯ ಕೆವಿ ಪಾಲಿಟೆಕ್ನಿಕ್​​ ಕಾಲೇಜಿನಲ್ಲಿ ಮತಯಾಚನೆ ಮಾಡಿರುವ ಆರೋಪ ಕೇಳಿ ಬಂದಿದೆ.

ಅರುಣ್​​ಕುಮಾರ್ ಮತಯಾಚನೆ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲಾಣಗಳಲ್ಲಿ ಪೋಸ್ಟ್​​ ಮಾಡಿದ್ದರು. ಈ ಕುರಿತು ರುದ್ರಪ್ಪ ಭಜಂತ್ರಿ ಎಂಬುವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!