ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನುಮತಿಯಿಲ್ಲದೇ ಚಿತ್ರ ಪ್ರಸಾರ ಮಾಡಿರುವುದು ಹಾಗೂ ಕಾಪಿರೈಟ್ ಉಲ್ಲಂಘನೆ ಪ್ರಕರಣದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಇತರ ಐವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಸುನೀಲ್ ದರ್ಶನ್ ತಮ್ಮ ಸಿನಿಮಾವೊಂದರ ಕಾಪಿರೈಟ್ ಉಲ್ಲಂಘನೆ ಆಗಿದೆ ಎಂದು ದೂರಿದ್ದಾರೆ.

ಎಕ್ ಹಸೀನಾ ಥಿ, ಎಕ್ ದಿವಾನಾ ಥಾ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ಅನುಮತಿ ಇಲ್ಲದೆ ಪ್ರಸಾರ ಮಾಡಲಾಗಿದೆ ಎಂದು ಸುನೀಲ್ ಆರೋಪಿಸಿದ್ದು, ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸುನೀಲ್ ಮಾತನಾಡಿ, ನನಗೆ ಪ್ರಚಾರ ಮಾಡುವ ಇಷ್ಟ ಇಲ್ಲ. ದಾಖಲೆ ಸಮೇತ ಎಲ್ಲವನ್ನೂ ನೀಡಲು ತಯಾರಿದ್ದೇನೆ. ಸತ್ಯ ಹೊರಬರಬೇಕು ಅಷ್ಟೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!