Sunday, August 14, 2022

Latest Posts

ಕಪಿಲ್ ಶರ್ಮಾ ಶೋ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ನ್ಯಾಯಾಲಯ ಕಪಿಲ್ ಶರ್ಮಾ ಶೋ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಕಾರ್ಯಕ್ರಮದ ವಿತರಕರು ಇದೀಗ ತೊಂದರೆಗೆ ಸಿಲುಕಿದ್ದಾರೆ. ನ್ಯಾಯಾಲಯದ ದೃಶ್ಯ ಪ್ರದರ್ಶಿಸುವಾಗ ವೇದಿಕೆಯಲ್ಲಿ ಕುಡಿಯುತ್ತಿರುವ ದೃಶ್ಯ ತೋರಿಸಲಾಗಿದೆ. ಇದು ನ್ಯಾಯಾಲಯಕ್ಕೆ ಅಗೌರವ ತೋರಿದಂತೆ ಎಂದು ದೂರುದಾರರು ಆರೋಪಿಸಿದ್ದಾರೆ.
ಅ.1ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಜ.19,2020 ರಂದು ಪ್ರಸಾರವಾದ ಸಂಚಿಕೆಯಲ್ಲಿ ಈ ಘಟನೆ ನಡೆದಿದೆ. ಇದು ಏ.24, 2021 ರಂದು ಮರು ಪ್ರಸಾರ ಹೊಂದಿತ್ತು. ನ್ಯಾಯಾಲಯದ ಸೆಟ್ ಹಾಕಿ, ಅದರಲ್ಲಿಯೇ ಮದ್ಯಪಾನ ಮಾಡಿದ್ದು, ನ್ಯಾಯಾಲಯಕ್ಕೆ ಮಾಡಿದ ಅವಮಾನ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss