ನಟಿ ರಾಖಿ ಪತಿ ಆದಿಲ್ ಮೇಲೆ ಮೈಸೂರಿನಲ್ಲಿ ಎಫ್ಐಆರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ನಟಿ ರಾಖಿ ಸಾವಂತ್ , ಪತಿ ದಿಲ್ ಖಾನ್ ದುರಾನಿ ಮೇಲೆ ಮೈಸೂರಿನಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಆದಿಲ್ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಮಹಿಳೆಯೊಬ್ಬರು ಆರೋಪ ಮಾಡಿದ್ದು, ದೂರು ಕೂಡ ನೀಡಿದ್ದಾರೆ. ಮಹಿಳೆ ನೀಡಿದ ದೂರನ್ನು ಆಧರಿಸಿ ಮೈಸೂರು ನಗರ ಪೊಲೀಸರು ಆದಿಲ್ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಈಗಾಗಲೇ ಪತ್ನಿ ರಾಖಿ ಸಾವಂತ್ ಮಾಡಿರುವ ವಂಚನೆ ಆರೋಪದಲ್ಲಿ ಆದಿಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈ ಮೊದಲು ಪತಿ ಆದಿಲ್ ಖಾನ್ ಬಗ್ಗೆ ಮತ್ತೊಂದುಆರೋಪಗಳನ್ನು ಮಾಡಿದ್ದ ನಟಿ ರಾಖಿ ಸಾವಂತ್, ತನ್ನ ಬೆತ್ತಲೆ ವಿಡಿಯೋಗಳನ್ನು ಗೊತ್ತಾಗದಂತೆ ಚಿತ್ರೀಕರಿಸಿ, ಹಣಕ್ಕಾಗಿ ಆದಿಲ್ ಮಾರಾಟ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಅಲ್ಲದೇ, ವರದಕ್ಷಿಣೆ ಕಿರುಕುಳ, ದೈಹಿಕ ಕಿರುಕುಳ ಸೇರಿದಂತೆ ಹಲವು ಆಪಾದನೆಗಳನ್ನು ಈಗಾಗಲೇ ರಾಖಿ ತಮ್ಮ ಪತಿಯ ಮೇಲೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!