ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇರಾಕ್ ನ ದಕ್ಷಿಣ ನಗರ ನಾಸಿರಿಯಾದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟದಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. 67ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ದಕ್ಷಿಣದ ನಾಸಿರಿಯಾ ನಗರದ ಅಲ್-ಹುಸೇನ್ ಕೋವಿಡ್ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ. ಈಗಾಗಲೆ ಯುದ್ಧಗಳಿಂದ ಕಂಗೆಟ್ಟಿದ್ದು, ಆರೋಗ್ಯ ಉಪಕ್ರಮಗಳಿಗಾಗಿ ಹೆಣಗಾಡುತ್ತಿದೆ. ಈ ನಡುವೆ ಮತ್ತೆ ಇಂತಹ ಭೀಕರ ದುರಂತ ಸಂಭವಿಸಿದೆ.
“ನನಗೆ ಕೋವಿಡ್ ಸೋಂಕಿತರ ವಾರ್ಡ್ ಒಳಗಿಂದ ದೊಡ್ಡ ಸ್ಫೋಟದ ಸದ್ದು ಕೇಳಿಸಿತು. ಕೂಡಲೇ ಬೆಂಕಿ ಹತ್ತಿಕೊಂಡಿತು” ಎಂದು ಆಸ್ಪತ್ರೆಯ ಗಾರ್ಡ್ ಅಲಿ ಮುಹ್ಸಿನ್ ತಿಳಿಸಿದ್ದಾರೆ.