Wednesday, August 10, 2022

Latest Posts

ದಾವಣಗೆರೆಯಲ್ಲಿ ಮೊಬೈಲ್ ಟವರ್‌ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ದಾವಣಗೆರೆಯ ಹಳೆ ಪ್ರವಾಸಿ ಮಂದಿರ ರಸ್ತೆಯ ಮಲ್ಲಿಕಾರ್ಜುನ ಲಾಡ್ಜ್ ಬಳಿ ಇರುವ ಮೊಬೈಲ್ ಟವರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿಶಾಮಕದಳ ಸಕಾಲದಲ್ಲಿ ಬೆಂಕಿ ನಂದಿಸಿದ್ದು, ಭಾರೀ ಅಗ್ನಿ ಅವಘಡ ತಪ್ಪಿದೆ.
ಜನರೇಟರ್ ಹೊತ್ತಿ ಉರಿದಿದ್ದು, ಭಾರೀ ಪ್ರಮಾಣದ ಹೊಗೆ ಆವರಿಸಿದೆ. ಬೆಂಕಿಗೆ ಬ್ಯಾಟರಿ, ಜನರೇಟರ್ ಹಾಗೂ ಕೇಬಲ್‌ಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕದಳದ ಸಹಾಯದಿಂದ ಶೀಘ್ರವೇ ಬೆಂಕಿ ನಂದಿಸಿದ್ದು, ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹತ್ತುವುದು ತಪ್ಪಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss