Sunday, July 3, 2022

Latest Posts

ನವಿ ಮುಂಬೈನ ಕಾರ್ ಶೋರೂಂನಲ್ಲಿ ಬೆಂಕಿ: 40 ಬಿಎಂಡಬ್ಲೂ ಬೆಂಕಿಗಾಹುತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವಿ ಮುಂಬೈನ ಶೋರೂಂ ಒಂದರಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದ್ದು, 40 ಬಿಎಂಡಬ್ಲೂ ಕಾರುಗಳು ಸುಟ್ಟು ಕರಕಲಾಗಿವೆ.
ಟುರ್ಬೆ ಎಂಐಡಿಸಿ ಏರಿಯಾದ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ.
ಶೋ ರೂಂ ಒಳಗೆ ಗಾಡಿಗಳನ್ನು ಪಾರ್ಕ್ ಮಾಡಿದ್ದ ಗೋಡೌನ್ ಕೂಡ ಇತ್ತು. ಇಲ್ಲಿ 40ಕ್ಕೂ ಹೆಚ್ಚು ಬಿಎಂಡಬ್ಲೂ ಕಾರ್‌ಗಳು ಇದ್ದವು. ಎಲ್ಲ ಕಾರುಗಳು ಸುಟ್ಟು ಕರಕಲಾಗಿದೆ ಎಂದು ಎಂಐಡಿಸಿ ಅಗ್ನಿಶಾಮಕದಳದ ಮುಖ್ಯ ಅಧಿಕಾರಿ ಆರ್.ಬಿ. ಪಾಟೀಲ್ ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss