ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರಿನಿಂದ ಕೊಲ್ಕತ್ತಾಗೆ ತೆರಳುತ್ತಿದ್ದ ಹೌರಾ ಎಕ್ಸ್ ಪ್ರೆಸ್ ರೈಲಿನಲ್ಲಿ ಆಂಧ್ರದ ಚಿತ್ತೂರು ಬಳಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣ ಅಪಾಯ ಸಂಭವಿಸಲಿಲ್ಲ.
ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ರೈಲು ಸಂಖ್ಯೆ 12246 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ದುರೊಂತೋ ಎಕ್ಸ್ ಪ್ರೆಸ್ ನಲ್ಲಿ ಚಿತ್ತೂರು ಜಿಲ್ಲೆ ಕುಪ್ಪಂ ನಿಲ್ದಾಣವನ್ನು ಸಮೀಪಿಸುತ್ತಿರುವಾಗ ಒಂದು ಬೋಗಿಯಲ್ಲಿ ಹೊಗೆ ಬರುತ್ತಿರುವುದನ್ನು ರೈಲು ನಿರ್ವಾಹಕರು ಗಮನಿಸಿದ್ದಾರೆ. ತಕ್ಷಣವೇ ರೈಲನ್ನು ನಿಲ್ಲಿಸಿ ಪರಿಶೀಲಸಲಾಗಿದೆ.
ಕೆಲ ಮಾಧ್ಯಮದಲ್ಲಿ ತಪ್ಪಾದ ವರದಿಯ ಬಗ್ಗೆ ಸ್ಪಷ್ಟೀಕರಣ
27.11.2022
ಕುಪ್ಪಂ/ಚಿತ್ತೂರು ಜಿಲ್ಲೆಯಲ್ಲಿ ರೈಲಿಗೆ ಬೆಂಕಿ ಬಿದ್ದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪು ವರದಿಗಳು ಬಂದಿವೆ.
ಈ ನಿಟ್ಟಿನಲ್ಲಿ ವಸ್ತುನಿಷ್ಠ ವಿವರಗಳನ್ನು ಈ ಮೂಲಕ ಸ್ಪಷ್ಟಪಡಿಸಲಾಗಿರುತ್ತದೆ:@PIBBengaluru @RailMinIndia pic.twitter.com/xIzrGiaJid— South Western Railway (@SWRRLY) November 27, 2022
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ, ಬೋಗಿಯಲ್ಲಿ ಬ್ರೇಕ್ ಬ್ಲಾಕ್ ನ ಘರ್ಷಣೆಯಿಂದಾಗಿ ಬ್ರೇಕ್ ಬೈಂಡಿಂಗ್ ಮತ್ತು ಹೊಗೆ ಬಂದಿರುವುದು ಕಂಡು ಬಂದಿದೆ. ರೈಲು ಸಿಬ್ಬಂದಿ ಅದನ್ನು ಸರಿಪಡಿಸಿದ್ದಾರೆ. ಈ ಬಳಿಕ ಬೆಂಗಳೂರು – ಹೌರ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಪುನರಾರಂಭಿಸಿದೆ. ಯಾವುದೇ ಪ್ರಯಾಣಿಕರಿಗೆ ಗಾಯ, ಹಾನಿ ಸಂಭವಿಸಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.