ಚಲಿಸುತ್ತಿದ್ದ ರೈಲಿನಲ್ಲಿ ಅಗ್ನಿ ಅವಘಡ: ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳು ಬೆಂಕಿಗಾಹುತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಚಲಿಸುತ್ತಿದ್ದ ರೈಲಿನ ನಾಲ್ಕು ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾದ ಘಟನೆ ಪಂಜಾಬ್‌ನ ಸರಾಯ್ ಬಂಜಾರಾ ರೈಲು ನಿಲ್ದಾಣದ ಸಮೀಪ ಶುಕ್ರವಾರ ನಡೆದಿದೆ. ಅಮೃತಸರದಿಂದ ನ್ಯೂ ಜಲ್ಪೈಗುರಿಗೆ ತೆರಳುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ವರದಿಯಾಗಿಲ್ಲ. ನಾಲ್ಕು ಬೋಗಿಗಳಿಗೆ ವ್ಯಾಪಿಸಿದ ಬೆಂಕಿ ರೈಲು ಸಂಖ್ಯೆ 12508ರ ಕರ್ಮಭೂಮಿ ಎಕ್ಸ್‌ಪ್ರೆಸ್‌ನ ಎಂಜಿನ್‌ನಿಂದ ಐದನೇ ಬೋಗಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ ಎಂದು … Continue reading ಚಲಿಸುತ್ತಿದ್ದ ರೈಲಿನಲ್ಲಿ ಅಗ್ನಿ ಅವಘಡ: ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳು ಬೆಂಕಿಗಾಹುತಿ