ಹೊಸದಿಗಂತ ವರದಿ ಗೋಕರ್ಣ:
ವೈನ್ ಶಾಪ್ ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಗೋಕರ್ಣದ ಬಸ್ ನಿಲ್ದಾಣದ ಬಳಿ ಸಂಭವಿಸಿದೆ ಶನಿವಾರ ಮಧ್ಯರಾತ್ರಿ ಸಂಭವಿಸಿದೆ.
ಬಸ್ ನಿಲ್ದಾಣದಲ್ಲಿ ಸಮೀಪ ಇರುವ ವನಶ್ರೀ ವೈನ್ ಶಾಪ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು ಅಂಗಡಿ ಒಳಗಡೆ ಇದ್ದ ವಿವಿಧ ಬ್ಯಾಂಡುಗಳ ಮದ್ಯದ ಬಾಟಲಿಗಳು ಹಾಗೂ ಸ್ವತ್ತುಗಳು ಸುಟ್ಟು ಕರಕಲಾಗಿವೆ.
ರಾತ್ರಿ ಸಮಯದಲ್ಲಿ ಬೆಂಕಿ ಬಿದ್ದಿರುವುದನ್ನು ಗಮನಿಸಿದ ಪ್ರವಾಸಿಗರು 112 ತುರ್ತು ಪೊಲೀಸ್ ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದು ಕುಮಟಾದಿಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರೂ ಕುಮಟಾದಿಂದ ಗೋಕರ್ಣಕ್ಕೆ ತಲಪುವ ವರೆಗೆ ಸಮಯ ಆಗಿದ್ದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸುವಂತಾಗಿದೆ.