ಹೊಸ ದಿಗಂತ ವರದಿ, ಮಂಗಳೂರು
ಸುಮಾರು 15 ಅಡಿಯ ಗುಂಡಿಗೆ ಬಿದ್ದ ಪಾರಿವಾಳವೊಂದನ್ನು ಸತತ ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಎಂ.ಜಿ.ರಸ್ತೆಯಲ್ಲಿ ನಿರ್ಮಾಣ ಕಾಮಗಾರಿಯೊಂದು ಸ್ಥಗಿತಗೊಂಡಿದ್ದು, ಕಟ್ಟಡದ ಪಾರ್ಕಿಂಗ್ ಸ್ಥಳಕ್ಕಾಗಿ ಸಾಕಷ್ಟು ಆಳ ಕೊರೆಯಲಾಗಿತ್ತು. ಅದರಲ್ಲಿ ನೀರು ತುಂಬಿದ್ದು ಅದಕ್ಕೆ ಪಾರಿವಾಳ ಬಿದ್ದಿತ್ತು. ಇದನ್ನು ಕಂಡ ಪರಿಸರ ಹೋರಾಟಗಾರ, NECF ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿಯವರು ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸಕಾಲಿಕ ಸ್ಪಂದನೆ ನೀಡಿದ ತಕ್ಷಣ ಸುಮಾರು ಎಂಟು ಮಂದಿಯ ಅಗ್ನಿಶಾಮಕ ತಂಡ, ಕಾರ್ಯಾಚರಣೆ ನಡೆಸಿ ಪುಟ್ಟ ಜೀವವನ್ನು ರಕ್ಷಿಸಿದೆ.
ಗುಂಡಿಯಲ್ಲಿ ಬಿದ್ದು ನೀರಿನಲ್ಲಿ ಒದ್ದೆಯಾಗಿ ಒದ್ದಾಡುತ್ತಿದ್ದ ಪಾರಿವಾಳವನ್ನು ರಕ್ಷಿಸಿದ ಅಗ್ನಿಶಾಮಕ ತಂಡದ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಪೂರ್ತಿ ಒದ್ದೆಯಾಗಿ ಒದ್ದಾಡುತ್ತಿದ್ದ ಪಾರಿವಾಳವನ್ನು ಅನಿಮಲ್ ಕೇರ್ ಟ್ರಸ್ಟ್ ನ ತೌಸೀಫ್ ಅವರಿಗೆ ಒಪ್ಪಿಸಲಾಗಿದೆ.