Thursday, August 18, 2022

Latest Posts

ಗ್ಯಾರೇಜ್’ನಲ್ಲಿ ಅಗ್ನಿ ಅವಘಡ: ಮೂರು ಕಾರುಗಳು ಸುಟ್ಟು ಭಸ್ಮ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಗ್ಯಾರೇಜ್​ವೊಂದರಲ್ಲಿನ ಕಾರುಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೂರು ಕಾರುಗಳು ಸುಟ್ಟು ಭಸ್ಮವಾಗಿದೆ. ಈ ದುರ್ಘಟನೆ  ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

ಆನೇಕಲ್ ಪಟ್ಟಣದ ಬಿದರಗೆರೆ ರಸ್ತೆಯಲ್ಲಿರುವ ಸಿಕಂದರ್ ಎಂಬುವವರಿಗೆ ಸೇರಿದ ಕಾರು ಗ್ಯಾರೇಜ್​ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಗ್ಯಾರೇಜ್ ಸಮೀಪದ ಪೊದೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ನಂತರ ಬೆಂಕಿಯ ಕೆನ್ನಾಲಿಗೆ ಗ್ಯಾರೆಜ್ ವರೆಗೂ ವ್ಯಾಪಿಸಿದೆ. ರಿಪೇರಿಗೆಂದು ತಂದು ನಿಲ್ಲಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೂರು ಕಾರುಗಳು ಬೆಂಕಿಗೆ ಆಹುತಿಯಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಸುಮಾರು ಒಂದು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆನೇಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ .

ಅಂದಹಾಗೆ ಗ್ಯಾರೇಜ್ ಮಾಲೀಕ ಸಿಕಂದರ್ ಹಲವು ವರ್ಷಗಳಿಂದ ಗ್ಯಾರೇಜ್ ನಡೆಸುತ್ತಿದ್ದ. ಲಾಕ್ ಡೌನ್ ಸಮಯದಲ್ಲಿ ನಷ್ಟ ಉಂಟಾಗಿದ್ದರಿಂದ ಸಾಲ ತೀರಿಸಲಾಗದೆ, ಗ್ಯಾರೇಜ್ ಬಂದ್ ಮಾಡಿ ಊರು ಬಿಟ್ಟು ಪರಾರಿಯಾಗಿದ್ದರು. ರಿಪೇರಿಗೆಂದು ಬಂದಿದ್ದ ಕಾರುಗಳನ್ನು ಗ್ಯಾರೇಜ್ ಸಮೀಪದ ಬಯಲಿನಲ್ಲಿಯೇ ನಿಲ್ಲಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!