Thursday, August 11, 2022

Latest Posts

ದೀದಿ ನಾಡಲ್ಲಿ ದೀಪಾವಳಿ ಸಂಭ್ರಮಕ್ಕೆ ಪಟಾಕಿ ಬ್ಯಾನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಿರುವ ಬೆನ್ನಲೇ,  ಇದೀಗ ಪಶ್ಚಿಮ ಬಂಗಾಳ ಕೂಡ ಇದೇ ಹಾದಿ ತುಳಿದಿದೆ.

ಹೌದು..ವಾಯುಮಾಲಿನ್ಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳ ಸರ್ಕಾರ ನಿರ್ಧಾರಕ್ಕೆ ಮುಂದಾಗಿದ್ದು, ದೀಪಾವಳಿ ಸಮಯದಲ್ಲಿ ಹಸಿರು ಪಟಾಕಿಗಳನ್ನು ಹಚ್ಚಲು ಮಾತ್ರ ಅವಕಾಶ ನೀಡಲಾಗಿದೆ.

ಹಸಿರು ಪಟಾಕಿ ಹಚ್ಚುವುದಕ್ಕೂ ಕೂಡ ಕೇವಲ 2 ಗಂಟೆಗಳು ಮಾತ್ರ ಅವಕಾಶ ನೀಡಲಾಗಿದ್ದು, ರಾತ್ರಿ 8 ರಿಂದ 10 ಗಂಟೆಯವರೆಗೆ ಹಸಿರು ಪಟಾಕಿ ಹಚ್ಚಬಹುದಾಗಿದೆ.

ಇನ್ನೂ ಕ್ರಿಸ್​ಮಸ್​ ದಿನದಂದು 35 ನಿಮಿಷ ಮತ್ತು ಹೊಸ ವರ್ಷದಂದು ರಾತ್ರಿ 11:55ರಿಂದ ಮುಂಜಾನೆ 12:35ರವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ ನೀಡುವುದಾಗಿ ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿ  ಆದೇಶ ಹೊರಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss