ಪಾಕ್‌ ನೆಲದಲ್ಲಿ ಭಾರತದ ಕ್ಷಿಪಣಿ: ಈ ಬಗ್ಗೆ ಅಮೆರಿಕ ಪ್ರತಿಕ್ರಿಯಿಸಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಾಕಿಸ್ತಾನದ ಪ್ರದೇಶದಲ್ಲಿ ಭಾರತದ ಕ್ಷಿಪಣಿ ಬಿದ್ದಿದ್ದ ಘಟನೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಮೆರಿಕ, ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ಹೇಳಿದೆ.
ಭಾರತವು ತನ್ನ ಭೂಪ್ರದೇಶದ ಮೇಲೆ ಕ್ಷಿಪಣಿ ಉಡಾಯಿಸಿದೆ ಎಂಬ ಪಾಕ್‌ ಆರೋಪಗಳನ್ನು ನಿರಾಕರಿಸಿರುವ ಅಮೇರಿಕಾದ ವಕ್ತಾರ ನೆಟಡ್‌ ಪ್ರೈಸ್‌, ಆಕಸ್ಮಿಕವಾಗಿ ನಡೆದಿರುವ ಘಟನೆಯನ್ನು ಹೊರತುಪಡಿಸಿ ಭಾರತ ಕ್ಷಿಪಣಿ ಉಡಾಯಿಸಿರುವ ಸೂಚನೆಗಳಿಲ್ಲ ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ವಸ್ತುನಿಷ್ಠ ತನಿಖೆ ನಡೆಯಬೇಕು ಎಂದು ಚೀನಾ ಒತ್ತಾಯಿಸಿದ ಬೆನ್ನಲ್ಲೇ ಅಮೇರಿಕಾದಿಂದ ಈ ಪ್ರತಿಕ್ರಿಯೆ ಬಂದಿದೆ. ಮಾರ್ಚ್‌ 9 ರಂದು ನಡೆದ ಘಟನೆ ಬಗ್ಗೆ ಭಾರತ ಈಗಾಗಲೇ ಸ್ಪಷ್ಟನೆ ನೀಡಿದೆ. ಇದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಡ ನಾವು ನೀಡುವುದಿಲ್ಲ ಎಂದು ಪ್ರೈಸ್‌ ಹೇಳಿಕೆ ನೀಡಿದ್ದಾರೆ.
ಭಾರತದ ಸೂಪರ್‌ ಸಾನಿಕ್‌ ಕ್ಷಿಪಣಿಯೊಂದು ಸೂರತ್‌ ಘಟಕದಿಂದ ಉಡಾವಣೆಗೊಂದು ಪಾಕ್‌ ಭೂಪ್ರದೇಶದಲ್ಲಿ ಬಿದ್ದಿತ್ತು. ತಾಂತ್ರಿಕ ದೋಷದಿಂದ ಕ್ಷಿಪಣಿ ಆಕಸ್ಮಿಕವಾಗಿ ಹಾರಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!