ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನ ಸಹೋದರನ ಮೇಲೆ ಫೈರಿಂಗ್

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ತಾಲೂಕಿನ ಪಟ್ಟಣ ಪಂಚಾಯತ್ ಮಾಜಿ ಸದಸ್ಯನ ಸಹೋದರನ ಮೇಲೆ ಶನಿವಾರ ಮಧ್ಯಾಹ್ನ ಫೈರಿಂಗ್ ಮಾಡಿರುವ ಘಟನೆ ನಡೆದಿದೆ.

ನಗರದ ಆಳಂದ ಚೆಕ್ ಪೋಸ್ಟ್ ಹತ್ತಿರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯನ ಸಹೋದರ ಚೆನ್ನವೀರ ಪಾಟೀಲ್, ಹಾಗೂ ಜೊತೆಗಿದ್ದ ಹುಡುಗನ ಮೇಲೆ ದಷ್ಕಮಿ೯ಗಳು ಫೈರಿಂಗ್ ಮಾಡಿದ್ದಾರೆ.

ಬುಲೆರೋ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಚನ್ನವೀರ ಪಾಟೀಲ್ ಕೈಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಚನ್ನವೀರ ಪಾಟೀಲ್ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸಂತೋಷ ಪಾಟೀಲ್ ದಣ್ಣೂರ ಸಹೋದರನಾಗಿದ್ದು,ಸ್ಥಳಕ್ಕೆ ನಗರ ಡಿಸಿಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿದ್ದು,ಸಬ್ ಅಬ೯ನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!