ಯುಎಸ್​​ನಲ್ಲಿ ಮೊದಲ ಹಕ್ಕಿಜ್ವರ ಕೇಸ್​ ಪತ್ತೆ: ಕೊಲೊರಾಡೋ ವ್ಯಕ್ತಿಗೆ H5 ವೈರಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುಎಸ್​ನ ಕೊಲೊರಾಡೋದಲ್ಲಿ ಓರ್ವ ವ್ಯಕ್ತಿಯಲ್ಲಿ ಹೆಚ್​​ 5(H5) ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿದೆ.
H5 ವೈರಸ್‌ಗಳ ನಿರ್ದಿಷ್ಟ ಗುಂಪಿನೊಂದಿಗೆ ಸಂಬಂಧಿಸಿದ ಎರಡನೇ ಮಾನವ ಪ್ರಕರಣವಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ಪ್ರಕರಣವಾಗಿದೆ .
ಇನ್ನು ಈ ಪ್ರಕರಣವು ಮಾನವನ ಆರೋಗ್ಯದ ಅಪಾಯದ ಮೌಲ್ಯಮಾಪನವನ್ನು ಬದಲಾಯಿಸುವುದಿಲ್ಲ ಎಂದಿರುವ ಸಿಡಿಸಿ, ಇದಕ್ಕೆ ಬೇಕಾದ ಸಿದ್ಧತೆ ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ.
ಇತ್ತ ಕೊಲೊರಾಡೋ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಲಾಖೆಯು ಕೋಳಿ ಮತ್ತು ಕಾಡು ಪಕ್ಷಿಗಳನ್ನು ಸಾಕುತ್ತಿರುವ ಜನರನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇದರ ಜೊತೆಗೆ ಸಾಕು ಪಕ್ಷಿಗಳನ್ನು ಹಕ್ಕಿಜ್ವರ ಕಂಡು ಬಂದಿದೆಯೇ ಎಂಬುದರ ಬಗ್ಗೆಯೂ ಪರೀಕ್ಷಿಸಲಾಗತ್ತಿದೆ.
ಹಕ್ಕಿಜ್ವರ ಪತ್ತೆಯಾಗಿರುವ ವ್ಯಕ್ತಿಯು ಸೋಂಕಿತ ಕೋಳಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದನು. ಈತ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದು, ಕೊಂಚ ಆಯಾಸದ ಲಕ್ಷಗಳು ಕಂಡು ಬಂದಿವೆ. ಸಿಡಿಸಿ ಮಾರ್ಗದರ್ಶನದಂತೆ ವ್ಯಕ್ತಿಯೂ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!