ಹೊಸದಿಗಂತ ಆನ್ಲೈನ್ ಡೆಸ್ಕ್:
ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಝೀಕಾ ವೈರಸ್ ಪ್ರಕರಣ ದಾಖಲಾಗಿದೆ.
ಭಾರತೀಯ ವಾಯುಪಡೆಯ ವಾರೆಂಟ್ ಅಧಿಕಾರಿಯೊಬ್ಬರಿಗೆ ಸೋಂಕು ಕಾಣಿಸಿದೆ.
ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಜಿಲ್ಲೆಯ ವಾಯುಪಡೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯಾಧಿಕಾರಿ ನೇಪಾಲ್ ಸಿಂಗ್ ತಿಳಿಸಿದ್ದಾರೆ.
ರಕ್ತದ ಮಾದರಿ ಸಂಗ್ರಹಿಸಿ ಪುಣೆಗೆ ಕಳಿಸಿದ್ದು, ಝೀಕಾ ಪಾಸಿಟಿವ್ ದೃಢಪಟ್ಟಿದೆ. ರೋಗಿಯ ಸಂಪರ್ಕ ಹೊಂದಿದ್ದ22 ಮಂದಿಗೂ ರೋಗಲಕ್ಷಣಗಳು ಕಾಣಿಸಿದ್ದು, ಅವರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.