Wednesday, July 6, 2022

Latest Posts

ದೇಶದಲ್ಲೇ ಮೊದಲು: ಅರಮನೆ ನಗರಿ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ

ಹೊಸದಿಗಂತ ವರದಿ, ಮೈಸೂರು:

ದೇಶದಲ್ಲೇ ಮೊದಲ ಬಾರಿಗೆ ಅರಮನೆ ನಗರಿ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ.
ಕೇಂದ್ರ ಕಾರ್ಮಿಕ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಟ್ವಿನ್ಸ್ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರದಿಂದ ತೃತೀಯ ಲಿಂಗಿಗಳಿಗೆ ಇ ಶ್ರಮ್ ಕಾರ್ಡ್ ನೊಂದಣಿ ಕಾರ್ಯ ನಡೆದಿತ್ತು. ತೃತೀಯಲಿಂಗಿಗಳ ಸಂಘದ ಮುಖ್ಯಸ್ಥರಾದ ಪ್ರಣತಿ ಪ್ರಕಾಶ್ ನೇತೃತ್ವದಲ್ಲಿ ಸರಸ್ವತಿಪುರಂನ ತೃತೀಯ ಲಿಂಗಿಗಳ ಕಚೇರಿಯ ಆವರಣದಲ್ಲಿ 50ಕ್ಕೂ ಹೆಚ್ಚು ಮಂದಿ ತೃತೀಯ ಲಿಂಗಿಗಳಿಗೆ ಒಂದು ದಿನದ ಅಭಿಯಾನದ ಮೂಲಕ ಇ-ಶ್ರಮ್ ಕಾರ್ಡ್ ನೊಂದಣಿ ಕಾರ್ಯ ನಡೆದಿದೆ.
ಅಸಂಘಟಿತ ಕಾರ್ಮಿಕ ಅಭಿವೃದ್ಧಿ ಕಲ್ಯಾಣ ಯೋಜನೆಯಡಿ ಜಾರಿ ದೇಶಾದ್ಯಂತ ಅಸಂಘಟಿತ ಕಾರ್ಮಿಕರನ್ನು ಇ- ಶ್ರಮ್ ವ್ಯಾಪ್ತಿಯಲ್ಲಿ ಒಗ್ಗೂಡಿಸುವ ಕೆಲಸ ಇದಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ, ಕೃಷಿ ಮೀನುಗಾರರು, ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‌ಗಳು, ವ್ಯಾಪಾರಿಗಳು ಸೇರಿದಂತೆ ಸರ್ಕಾರವು ಬೀದಿಬದಿ ಗುರುತಿಸಿರುವ ಕೇಂದ್ರ ಸುಮಾರು 156 ವರ್ಗಗಳ ಕಾರ್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಇತರೆ ಕಾರ್ಮಿಕರು ವರ್ಗಗಳಡಿ ನೋಂದಣಿಯಾಗಬಹುದಾಗಿದೆ.
ನೋAದಣಿ ವಿಧಾನ ಮತ್ತು ಬೇಕಾಗುವ ದಾಖಲೆಗಳ ಬಗ್ಗೆ ಇ-ಶ್ರಮ್ ಪೋರ್ಟಲ್ ನಲ್ಲಿ ಸ್ವಯಂ ಅಥವಾ ಸಾಮಾನ್ಯ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಿಕೊಂಡು ಯುಎನ್ ಗುರುತಿನ ಚೀಟಿ ಪಡೆಯಬಹುದಾಗಿದೆ. ನೋಂದಣಿಗೆ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರಗಳಿರಬೇಕು.
ನೋಂದಣಿಯಿAದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆ ಪಡೆಯಬಹುದಾಗಿದೆ.1 ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾಬಿಮಾ ಯೋಜನೆ ಪ್ರಯೋಜನ (ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ರೂ. 2 ಲಕ್ಷ ಹಾಗೂ ಭಾಗಶ: ಅಂಗವಿಕಲತೆ ಹೊಂದಿದ್ದಲ್ಲಿ 1 ಲಕ್ಷ ಪಡೆಯಬಹುದಾಗಿದೆ)
ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಉಚಿತವಾಗಿದ್ದು, ನೋಂದಣಿಯ ನಂತರ ಫಲಾನುಭವಿಗಳು ಸ್ಥಳದಲ್ಲಿಯೇ ಗುರುತಿನ ಚೀಟಿ ಪಡೆಯಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss