Monday, August 8, 2022

Latest Posts

ಹು-ಧಾ ಪಾಲಿಕೆ ಚುನಾವಣಾ ಫಿಲಿತಾಂಶ| ಮೊದಲ ಹಂತದ ಮತ ಎಣಿಕೆ ಪೂರ್ಣ: 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಧಾರವಾಡ:

ಹು-ಧಾ ಮಹಾನಗರ ಪಾಲಿಕೆ ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, 82 ವಾರ್ಡ್ ಗಳ ಪೈಕಿ 20 ಕ್ಷೇತ್ರದಲ್ಲಿ ಬಿಜೆಪಿ, 12 ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಮೂರು ಪಕ್ಷೇತರ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳಾದ ವಾರ್ಡ್-57 ಮಿನಾಕ್ಷಿ ವಂಟಿಮುರಿ, ವಾರ್ಡ್-73ರಲ್ಲಿ ಶೀಲಾ ಕಾಟ್ಕರ್, ವಾರ್ಡ್-67 ರಲ್ಲಿ ಶಿವು ಮೆಣಸಿನಕಾಯಿ, ವಾರ್ಡ್-18ರಲ್ಲಿ ಶೆಂಕರ ಸೆಳಕೆ ಗೆಲವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳಾದ ವಾರ್ಡ್-62ರಲ್ಲಿ ಸರ್ತಾಜ ಶರೀಪ್, ವಾರ್ಡ್-63ರಲ್ಲಿ ಅಹ್ಮದ್ ಇಲಿಯಾಸ್, ವಾರ್ಡ್-33 ಇಮ್ರಾನ್ ಯಲಿಗಾರ, ವಾರ್ಡ್-23ರಲ್ಲಿ ಮಂಜುನಾಥ ‌ಬಟಕುರ್ಕಿ, ವಾರ್ಡ್-58ರಲ್ಲಿ ಶೃತಿ ಛಲವಾದಿ ಜಯ ಗಳಿಸಿದ್ದಾರೆ.

64ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಪೂಜಾ ಬಿಜವಾಡಕರ, 52ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಚೇತನ್ ಹಿರೇಕೆರೂರ ಜಯ ಸಾಧಿಸಿದ್ದಾರೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss