ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಿದ್ದು, 189 ಅಭ್ಯರ್ಥಿಗಳಿರುವ ಈ ಮೊದಲ ಪಟ್ಟಿಯೇ ನಮ್ಮ ಗೆಲುವಿನ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಟಿಕೆಟ್ ತಪ್ಪಿದವರಿಗೆ ಮುಂದಿನ ಅವಕಾಶದ ಬಗ್ಗೆ ಹೇಳಿದ್ದೇವೆ. ಇನ್ನೆರಡು ದಿನದಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದಿದ್ದಾರೆ. ಹೊಸ ಮುಖಗಳನ್ನು ತರುವ ಪ್ರಯತ್ನ ಮಾಡಿದ್ದು, ಹೊಸಬರಿಗೆ ಮಣೆ ಹಾಕಿದ್ದೇವೆ, ಪಟ್ಟಿ ನೋಡಿದರೆ ಸಾಕು ಇದು ನಮ್ಮ ಗೆಲುವು ಎಂದು ತಿಳಿಯುತ್ತದೆ ಎಂದಿದ್ದಾರೆ.

ಮೂರು ದಿನದ ಚರ್ಚೆ ನಂತರ ಮೊದಲ ಪಟ್ಟಿ ತಯಾರಾಗಿದೆ. ಇನ್ನೂ 35 ಕ್ಷೇತ್ರಗಳಿಗೆ ಟಿಕೆಟ್ ಪಟ್ಟಿ ಪ್ರಕಟವಾಗಬೇಕಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!