ಹಾಲು ಉತ್ಪಾದಕರ ನೆರವಿಗಾಗಿ ದೇಶದಲ್ಲಿನೇ ಪ್ರಪ್ರಥಮ ಕ್ಷೀರ ಸಮೃದ್ಧಿ ಬ್ಯಾಂಕ್: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ಹಾವೇರಿ :

ರಾಜ್ಯದಲ್ಲಿ ಹೈನುಗಾರಿಕೆಯನ್ನು ಹೆಚ್ಚಿಸುವುದಕ್ಕೆ, ಹಾಲು ಉತ್ಪಾದಕರು ರಾಸುಗಳನ್ನು ಖರೀದಿಸುವುದಕ್ಕೆ ಹಣಕಾಸಿನ ನೆರವನ್ನು ನೀಡುವುದಕ್ಕೆ ದೇಶದಲ್ಲಿನೇ ಪ್ರಪ್ರಥಮವಾಗಿ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಪ್ರಾರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ಮೆಗಾ ಡೈರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ನಂದಿನ ಹಾಲು ಮತ್ತು ಅದರ ಉತ್ಪನ್ನಗಳ ವಹಿವಾಟು ಮತ್ತು ಅದರಿಂದ ಲಾಭಾಂಶ ಹೆಚ್ಚಾಗಬೇಕಾದರೆ ಹಾಲಿನ ಉತ್ಪಾದನೆಯೂ ಹೆಚ್ಚಾಗಬೇಕು ಈ ಹಿನ್ನಲೆಯಲ್ಲಿ ರಾಸುಗಳನ್ನು ಕೊಳ್ಳುವುದಕ್ಕೆ ಸುಲಭದಲ್ಲಿ ಸಾಲದ ರೂಪದಲ್ಲಿ ಹಣಕಾಸಿನ ನೆರವನ್ನು ಒದಗಿಸುವುದಕ್ಕೆ ಕ್ಷೀರ ಸಮೃದ್ಧಿ ಬ್ಯಾಂಕ್ ಪ್ರಾರಂಭಕ್ಕೆ ಸರ್ಕಾರ ಮುಂದಾಗಿದೆ. ಇದು ಅಂತಿಮ ಹಂತದಲ್ಲಿದೆ ಎಂದರು.
ಈ ಬ್ಯಾಂಕ್ ಪ್ರಾರಂಭಕ್ಕೆ ಆರ್‌ಬಿಐ ಕೆಲ ಸ್ಪಷ್ಟನೆಯನ್ನು ಕೇಳಿದೆ ಆ ಎಲ್ಲವನ್ನು ಸರಿಪಡಿಸಿ ಆದಷ್ಟು ಬೇಗ ಪ್ರಾರಂಭಿಸಲಾಗುವುದು. ಇದು ಹಾಲು ಉತ್ಪಾದಕರಿಂದ ಹಾಲು ಉತ್ಪಾದಕರಿಗೋಸ್ಕರ ಸ್ಥಾಪಿಸಲಾಗುತ್ತಿರುವ ಭಾರತದ ಮೊಟ್ಟ ಮೊದಲ ಬ್ಯಾಂಕ್ ರಾಜ್ಯದಲ್ಲಿ ಆಗಲಿದೆ ಎಂದು ತಿಳಿಸಿದರು.
ರೈತರು ತಮ್ಮ ಹೊಲಗಳಲ್ಲಿ ಸರ್ಕಾರದ ಯೋಜನೆಗಳಿಂದ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದಕ್ಕೆ ರೈತರು ತಮ್ಮ ಹೊಲಗಳಲ್ಲಿ ಯಾರಿಂದಲಾದರೂ ಕೆಲವೆ ಬಾವಿಗಳನ್ನು ಕೊರೆಸಿಕೊಳ್ಳುವಂತಾಗಲು ಸರ್ಕಾರ ನೀಡುವ ಅನುದಾನವನ್ನು ನೇರವಾಗಿ ರೈತರ ಖಾತೆಗಳಿಗೆನೇ ಜಮಾ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಮಧ್ಯವರ್ತಿಗಳ ಮತ್ತು ಗುತ್ತಿಗೆದಾರರ ಕಾಟ ರೈತರಿಗೆ ಇರುವುದಿಲ್ಲ. ಸರ್ಕಾರ ಮತ್ತು ಮದ್ಯವರ್ತಿಗಳ ಸರ್ಕಾರ ಈ ಹಿಂದೆ ಇತ್ತು. ರಾಜ್ಯದ ಎಲ್ಲೆಡೆಯೂ ಅವರೆ ಗುತ್ತಿಗೆ ಪಡೆದುಕೊಳ್ಳುತ್ತಿದ್ದರು ಇದನ್ನು ತಪ್ಪಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ರೈತರ ಆದಾಯ ಎರಡು ಪಟ್ಟು ಹೆಚ್ಚಾಗಬೇಕೆನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಆಶಯ. ರೈತರ ಆದಾಯ ಹೆಚ್ಚಾದರೆ ದೇಶದ ಆದಾಯವೂ ಹೆಚ್ಚಾಗುತ್ತದೆ ಎನ್ನುವುದು ಅವರ ಸ್ಪಷ್ಟನೆ ಮತ್ತು ಆಶಯ. ಈ ಹಿನ್ನಲೆಯಲ್ಲಿ ರೈತರ ಆದಾಯ ಹೆಚ್ಚಾಗಬೇಕಾದರೆ ಕೃಷಿ ಚಟುವಟಿಕೆಗಳಿಗೆ ಹೊಂದಿಕೊಂಡಿರುವುದೆಂದರೆ ಹೈನುಗಾರಿಕೆ. ಹಾಲು ಉತ್ಪಾದನೆಯೊಂದಿಗೆ ಮತ್ತಿತರ ಉಪ ಕಸುಬುಗಳನ್ನು ಮಾಡಿದಾಗ ಮಾತ್ರ ರೈತರ ಆದಾಯ ಹೆಚ್ಚಾಗಲು ಸಾಧ್ಯವಾಗುತ್ತದೆ ಹಾಗು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಚಿವರಾದ ಬಿ.ಸಿ.ಪಾಟೀಲ, ಬಾಲಚಂದ್ರ ಜಾರಕಿಹೊಳಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಕೆಎಂಎಫ್ ನಿರ್ದೇಶಕ ಬಸವರಾಜ ಅರಬಗೊಂಡರ ಮಾತನಾಡಿದರು, ವೇದಿಕೆಯಲ್ಲಿ ಸಚಿವ ಅರಬೈಲ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮತ್ತಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!