ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈನಿಂದ ಶ್ರೀಲಂಕಾಗೆ ವಾಪಾಸಾದ ವ್ಯಕ್ತಿಗೆ ಮಂಕಿಪಾಕ್ಸ್ ಕಾಣಿಸಿಕೊಂಡಿದೆ ಎಂದು ಶ್ರೀಲಂಕಾದ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ತಿಳಿಸಿದ್ದಾರೆ.
20 ವರ್ಷದ ಯುವಕ ದುಬೈನಿಂದ ಶ್ರೀಲಂಕಾಗೆ ವಾಪಾಸಾಗಿದ್ದ. ವೈರಸ್ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹರಡುವ ಕಾಯಿಲೆ ಇದಾಗಿದೆ. ಹೆಚ್ಚು ಜಾಗರೂಕತೆ ಅವಶ್ಯ ಎಂದು ತಜ್ಞರು ಹೇಳಿದ್ದಾರೆ.