spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರಾರಂಭವಾಗಲಿದೆ ನಿಯೋ ಮೆಟ್ರೋ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೊದಲ ನಿಯೋ ಮೆಟ್ರೋ ನಿರ್ಮಾಣವಾಗಲಿದ್ದು, ಕೆಲಸಕ್ಕೆ ತೆರಳುವ ಲಕ್ಷಾಂತರ ಜನರಿಗೆ ಸಿಹಿಸುದ್ದಿ ಸಿಕ್ಕಂತೆಯಾಗಿದೆ.
ಮೆಟ್ರೋ ನಿಯೋ ಓವರ್ ಹೆಡ್ ಎಲೆಕ್ಟ್ರಿಕ್ ಟ್ರ್ಯಾಕ್ ಹೊಂದಿರುವ ರೈಲನ್ನು ಸುಮಾರು ನಾಲ್ಕು ಕಿ.ಮೀ ದೂರದ ವರೆಗೆ ನಿಯೋ ಮಾರ್ಗ ನಿರ್ಮಿಸುವ ಚಿಂತನೆಯಲ್ಲಿ ಎಲೆಕ್ಟ್ರಾನಿಕ್ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿ ಇದೆ.
ಹಳದಿ ಮೆಟ್ರೋ ಮಾರ್ಗದಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿದಿನ ಸಂಚರಿಸುವ ಲಕ್ಷಾಂತರ ಜನರಿಗೆ ಈ ಮೆಟ್ರೋ ಸಹಕಾರಿಯಾಗಲಿದೆ.
2023ರ ವೇಳೆಗೆ ಬೊಮ್ಮನಹಳ್ಳಿ ಆರ್‌ವಿರಸ್ತೆ ಮೆಟ್ರೋ, ಬೊಮ್ಮಸಂದ್ರ-ಬೊಮ್ಮನಹಳ್ಳಿ ಕಾರಿಡಾರ್‌ನ ಹೊಸೂರು ರಸ್ತೆ ಮೆಟ್ರೋ ಸಿದ್ಧವಾಗಲಿದೆ.
ಮೆಟ್ರೋದಲ್ಲಿ ಸಾಕಷ್ಟು ವಿಶೇಷ ರೀತಿಯಲ್ಲಿ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಚಾಲಕ ರಹಿತ ಮೆಟ್ರೋ ವ್ಯವಸ್ಥೆ ಹಾಗೂ 2ನೇ ಹಂತದ ನಗರಗಳಲ್ಲಿ ಮೆಟ್ರೋ ಲೈಟ್‌, ನಿಯೊ ಸೇವೆಗೆ ಕೆಲಸ ಚುರುಕಾಗಿದೆ.

ಏನಿದು ನಿಯೋ ಮೆಟ್ರೋ?: ಈ ಮೆಟ್ರೋ ರಸ್ತೆ ಹಾಗೂ ಹಳಿ ಎರಡರ ಮೇಲೂ ಸಂಚರಿಸುವ ವ್ಯವಸ್ಥೆ ಹೊಂದಿರಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss