Wednesday, July 6, 2022

Latest Posts

ನಾಗ್ಪುರದಲ್ಲಿ ಮೊದಲ ಒಮಿಕ್ರಾನ್‌ ಕೇಸ್ ಪತ್ತೆ: ದೇಶದಲ್ಲಿ 37ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಾಗ್ಪುರದಲ್ಲಿ ಮೊದಲ ಒಮಿಕ್ರಾನ್‌ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.‌
ಈ ಕುರಿತು ನಾಗ್ಪುರ ಮುನ್ಸಿಪಲ್ ಆಯುಕ್ತ ರಾಧಾಕೃಷ್ಣನ್ ಬಿ ಮಾಹಿತಿ ನೀಡಿದ್ದು, ‘ನಾಗ್ಪುರ ಒಮಿಕ್ರಾನ್ ರೂಪಾಂತರದ ಮೊದಲ ಪ್ರಕರಣವನ್ನು ವರದಿ ಮಾಡಿದೆ ಎಂದು ತಿಳಿಸಿದ್ದಾರೆ.
40 ವರ್ಷದ ವ್ಯಕ್ತಿಯನ್ನ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19ಗೆ ಪಾಸಿಟಿವ್ ಆಗಿತ್ತು. ಸದ್ಯ ಜಿನೋಮಿಕ್‌ ಸ್ವಿಕ್ವೆನ್ಸಿಂಗ್‌ ವರದಿ ಬಂದಿದ್ದು, ಒಮಿಕ್ರಾನ್ ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss