Monday, October 3, 2022

Latest Posts

ರಜನಿಕಾಂತ್- ಶಿವರಾಜಕುಮಾರ್​ ಅಭಿನಯದ ಜೈಲರ್ ಚಿತ್ರದ ಮೊದಲ ಪೋಸ್ಟರ್ ರಿಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೂಪರ್‌ಸ್ಟಾರ್ ರಜನಿಕಾಂತ್ ನಾಯಕರಾಗಿ ನಟಿಸುತ್ತಿರುವ ಜೈಲರ್‌ ಚಿತ್ರದ ಚಿತ್ರೀಕರಣವು ಇಂದು (ಸೋಮವಾರ) ಪ್ರಾರಂಭವಾಯಿತು. ಶೂಟಿಂಗ್​ ಸ್ಪಾಟ್​ನಿಂದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಅಭಿಮಾನಿಗಳು ಮತ್ತು ನೆಟಿಜನ್​ಗಳು ಬಹುಪರಾಕ್​ ಹೇಳುತ್ತಿದ್ದಾರೆ.

ರಜನಿಕಾಂತ್ ಅವರ ಮೊದಲ ಪೋಸ್ಟರ್​ ಅನ್ನು ಸಹ ಬಿಡುಗಡೆ ಮಾಡಲಾಗಿದ್ದು ಚಿತ್ರದ ನಿರ್ಮಾಪಕರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ರಜನಿಕಾಂತ್​ ಅವರ 169ನೇ ಚಿತ್ರ ಇದಾಗಿದ್ದು, ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಸಂಸ್ಥೆಯು ಚಿತ್ರಕ್ಕೆ ಆರ್ಥಿಕ ಇಂದನ ತುಂಬಲು ಸಿದ್ಧಗೊಂಡಿದೆ.
ಜೈಲರ್ ಇಂದು ತನ್ನ ಕ್ರಿಯೆಯನ್ನು ಪ್ರಾರಂಭಿಸುತ್ತಾನೆ!ಎಂಬ ಶೀರ್ಷಿಕೆಯಡಿ ಸನ್ ಪಿಕ್ಚರ್ಸ್ ಸಂಸ್ಥೆಯು ಅವರ ಫಸ್ಟ್​ ಲುಕ್​ ಅನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಹಂಚಿಕೊಂಡಿದೆ.

ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಜೊತೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಚಿತ್ರದ ಪ್ಲಸ್​ ಪಾಯಿಂಟ್​ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್​ ಶಿವರಾಜ್​ ಕುಮಾರ್​ ನಟಿಸಲಿದ್ದಾರೆ ಅನ್ನೋದು ಮತ್ತೊಂದು ವಿಶೇಷ. ಕಾರಣ ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ರಜನಿಕಾಂತ್‌ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ಸಿನಿಪ್ರಿಯರಿಗೆ ಸಖತ್ ಥ್ರಿಲ್ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!