Monday, July 4, 2022

Latest Posts

ಕೋವಿಡ್-19 ಸೊಂಕು ಕಡಿವಾಣಕ್ಕೆ ಮೊದಲ ಆದ್ಯತೆ: ಸಚಿವ ಕೆ.ಎಸ್.ಈಶ್ವರಪ್ಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ, ಬಳ್ಳಾರಿ:

ಕೆಲವರ ವರ್ತನೆಯಿಂದ ಅನಿಶ್ಚಿತ ವಾತಾವರಣ ನಿರ್ಮಾಣವಾಗಿದ್ದು, ಅಂಥವರಿಗೆ ಪಕ್ಷದ ಹೈಕಮಾಂಡ್ ಕಿವಿ‌ ಹಿಂಡುವ ಕೆಲ ಮಾಡಿದ್ದು, ಇದನ್ನೇ ತಪ್ಪಾಗಿ ಅರ್ಥೈಸಕೂಡದು.ನಮ್ಮ ಸರ್ಕಾರದ ‌ಮುಂದೆ ಇರೋದು, ಕೋವಿಡ್-19, ಈ ಸೊಂಕಿನ ಸರಪಳಿ ತುಂಡರಿಸುವುದು, ಸೊಂಕಿತರಿಗೆ ಚಿಕಿತ್ಸೆ ಕಲ್ಪಿಸಲು ಆದ್ಯತೆ‌ ನೀಡಿದ್ದೆವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ, ಸರ್ಕಾರ ಕೊರೋನಾ ಸೊಂಕಿನ ಸರಪಳಿ ತುಂಡರಿಸಲು ಅನೇಕ ಕಠಣ ಕ್ರಮಗಳನ್ನು ಕೈಗೊಂಡಿದ್ದು, ಬಹುತೇಕ ಎಲ್ಲ ಜಿಲ್ಲೆಯಲ್ಲಿ ಸೊಂಕಿನ ಅರ್ಭಟ ಕಡಿಮೆಯಾಗಿದೆ. ಸಂಪೂರ್ಣ ತೊಲಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೇರಿದಂತೆ ಎಲ್ಲರೂ ಶ್ರಮಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕೆಲವರು ನಾಯಕತ್ವ ಬದಲಾವಣೆ, ನಾನಾ ದೂರುಗಳ ಪಟ್ಟಿಯನ್ನು ಹಿಡಿದು ಹೈಕಮಾಂಡ್ ಕದತಟ್ಟುವುದು ಸರಿಯಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ನಾಯಕರು, ಸದ್ಯ ನಾಯಕತ್ವ ಬದಲಾವಣೆಯ ಮಾತೇ ಇಲ್ಲ ಎಂದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ವಿಚಾರದಲ್ಲಿ ಶಾಸಕರ ಸಹಿ ಸಂಗ್ರಹದ‌ ಕುರಿತು ಮಾತನಾಡಿದ್ದು, ಇದಕ್ಕೆ ಮಹತ್ವ ಕೊಡುವುದು ಬೇಡ. ಬಿಜೆಪಿಯಲ್ಲಿ‌ ನಾಯಕತ್ವದ ಬಗ್ಗೆ ಶಾಸಕರಿಂದ ಸಹಿ ಸಂಗ್ರಹ ವ್ಯವಸ್ಥೆ ಇಲ್ಲ. ಶಾಸಕ ರೇಣುಕಾಚಾರ್ಯ‌ ಸಹಿ ಸಂಗ್ರಹ ಕುರಿತು ಹೇಳಿದ್ದನ್ನೇ ಹೇಳುತ್ತಿದ್ದಾರೆ. ಇದಕ್ಕೆ ಹೆಚ್ಚು ‌ಮಹತ್ವ ನೀಡುವುದು ಬೇಡ, ಇಷ್ಟಕ್ಕೂ ಸಹಿ ಸಂಗ್ರಹ ಮಾಡಿ ಎಂದು ರೇಣುಕಾಚಾರ್ಯ‌ ಅವರಿಗೆ ಯಾರು ಹೇಳಿಲ್ಲ. ನಮ್ಮ ಬಿಜೆಪಿಯಲ್ಲಿ ಹೈ ಕಮಾಂಡ್ ತೀರ್ಮಾನವೇ ಅಂತಿಮ. ರೇಣುಕಾಚಾರ್ಯ ಅವರು ಅಂದುಕೊಂಡಿದ್ದು ಮಾಡಲು‌ ಹೊರಟಿದ್ದಾರೆ.
ಕೊರೋನಾ ಸೊಂಕು ಕಡಿಮೆಯಾಗುತ್ತಿದ್ದು, ವಿಧಿಸಿದ ಲಾಕ್ ಡೌನ್ ತೆರವುಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ಕೋಟಿ ವ್ಯಾಕ್ಸಿನ್ ಶೀಘ್ರದಲ್ಲೇ ಬರಲಿದ್ದು, ಬಂದ ಕೂಡಲೇ ಜನರಿಗೆ ನೀಡಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss