ಹೊಸದಿಗಂತ ವರದಿ,ಕುಶಾಲನಗರ:
ರಾಜ್ಯದ ಪ್ರಥಮ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ರಾಜ್ಯ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಿತೇಂದ್ರ ಶೆಟ್ಟಿ ಮತ್ತು ಇಂಜಿನಿಯರ್ ಹರೀಶ್ ಭೇಟಿ ನೀಡಿದರು.
ಕೂಡಿಗೆ ಕ್ರೀಡಾ ಶಾಲೆಯ ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನವಾಗಿ ಸಿಂಥೆಟಕ್ ಟರ್ಫ್ ಹಾಕಿ ಮೈದಾನದ ಪರಿಶೀಲನೆ ನಡೆಸಿದರು. ಹಾಕಿ ಮೈದಾನದ ಸಂಪೂರ್ಣವಾದ ಮಾಹಿತಿಯನ್ನು ಇಂಜಿನಿಯರ್ ನಿಂದ ಪಡೆದು ನಂತರ ಆಗಬೇಕಾಗಿರುವ ಕೆಲವು ಕೆಲಸಗಳನ್ನು ಪೂರ್ಣಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು. ನಂತರ ಕ್ಷೇತ್ರದ ಆವರಣದಲ್ಲಿರುವ ಒಳಾಂಗಣ ಕ್ರೀಡಾಂಗಣದ ಸ್ಧಳಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಕ್ಷೇತ್ರದ ಶಾಸಕರ ಅದೇಶದಂತೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಸದ್ಯದಲ್ಕೇ ರಾಜ್ಯ ಕ್ರೀಡಾ ಸಚಿವರ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ, ಅಥ್ಲೆಟಿಕ್ ತರಬೇತಿದಾರ ಅಂತೋಣಿ ಡಿಸೋಜ, ಹಾಕಿ ತರಬೇತಿದಾರ ವೆಂಕಟೇಶ,ಮಂಜುನಾಥ ಶಿಕ್ಷಕರಾದ ದೇವಕುಮಾರ್, ಪ್ರೇಮನಾಥನ್, ಸಹ ಶಿಕ್ಷಕರು ಮತ್ತು ವಸತಿ ಗೃಹದ ಮೇಲ್ವಿಚಾರಕರು ಹಾಜರಿದ್ದರು.