ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಇಸ್ರೋ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ. PSLV-ಸಿ60 ರಾಕೆಟ್ ಮೂಲಕ ಸ್ಪೇಸ್ ಡಾಕಿಂಗ್(SpaDeX) ಪ್ರಯೋಗ ಉಡಾವಣೆ ಯಶಸ್ವಿಯಾಗಿ ಮಾಡಿದೆ.
ಇಸ್ರೋ ಐತಿಹಾಸಿಕ ಸಾಧನೆಯ PSLV-ಸಿ60 ರಾಕೆಟ್ ಉಡಾವಣೆಯನ್ನು ರಾತ್ರಿ 10 ಗಂಟೆಗೆ ಸಮಯದಲ್ಲಿ ಯಶಸ್ವಿಯಾಗಿ ಮಾಡಿದೆ.
ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಡಾಕಿಂಗ್ ಮಾಡುವ ಈ ಯೋಜನೆ ಇಸ್ರೋ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಈ ಮೂಲಕ ಸ್ಪೇಸ್ ಡಾಕಿಂಗ್ ತಂತ್ರಜ್ಞಾನ ಹೊಂದಿದೆ ಜಗತ್ತಿನ ನಾಲ್ಕನೇ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತಕ್ಕೂ ಮೊದಲು ಅಮೇರಿಕ, ಚೀನಾ, ರಷ್ಯಾ ಈ ತಂತ್ರಜ್ಞಾನ ಬಳಸಿಕೊಂಡಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹಿಡಿತದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರೀತಿಯಲ್ಲೇ ಇದೀಗ ಇಸ್ರೋ ತನ್ನ ಸ್ವದೇಶಿ ಭಾರತೀಯ ಅಂತರಿಕ್ಷ ನಿಲ್ದಾಣದ ಯೋಜನೆ ಹಾಕಿಕೊಂಡಿದೆ. ಈ ಕೇಂದ್ರ ಸ್ಥಾಪಿಸಲು ಸ್ಪೇಸ್ ಡಾಕಿಂಗ್ ಅತ್ಯವಶ್ಯಕವಾಗಿದೆ. ಬಾಹ್ಯಾಕಾಶದಲ್ಲಿ ಭಾರತದ ಇಸ್ರೋ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಬಾಹ್ಯಾಕಾಶ ಕೇಂದ್ರಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್, ಅನ್‌ಡಾಕಿಂಗ್ ಸಾಮರ್ಥ್ಯ ಹಾಗೂ ಪರಿಣಿತಿ ಹೊಂದಿರಬೇಕು. ಇಷ್ಟೇ ಅಲ್ಲ ಮುಂದಿನ ಇಸ್ರೋದ ಪ್ರಮುಖ ಯೋಜನೆಗಳಾದ ಮಾನವರಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರ ರವಾನೆ ಸೇರಿದಂತೆ ಹಲವು ಯೋಜನೆಗಳಿಗೆ ಸ್ಪೇಸ್ ಡಾಕಿಂಗ್ ಅತೀ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಇಸ್ರೋದ ಮೊದಲ ಪ್ರಯೋಗ ಯಶಸ್ವಿಯಾಗಿ ಉಡಾವಣೆಯಾಗಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-ಸಿ60 ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಜನವರಿ ತಿಂಗಳಲ್ಲೇ ಅಂದರೆ ಇನ್ನು ಕೆಲವೇ ದಿನಗಳಲ್ಲಿ ಸ್ಪೇಸ್ ಡಾಕಿಂಗ್ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ.