ಹುಟ್ಟುಹಬ್ಬದಂದು ತಮ್ಮ ಮುಂದಿನ ಚಿತ್ರದ ವಿಡಿಯೊ ತುಣುಕು ಹಂಚಿಕೊಂಡ ಆಲಿಯಾ ಭಟ್!‌ ಹೇಗಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್‌ ನ ಬಹುಬೇಡಿಕೆಯ ನಟಿಯರಲ್ಲಿ ಆಲಿಯಾ ಭಟ್‌ ಸದಾ ಮುಂಚೂಣಿಯಲ್ಲಿರುತ್ತಾರೆ. ಇಂದು ಅವರು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಹೊಸ ಚಿತ್ರ ಬ್ರಹ್ಮಾಸ್ತ್ರದ ಮೊದಲ ಲುಕ್‌ ಬಿಡುಗಡೆ ಮಾಡಿದ್ದಾರೆ.
ಪ್ರಸ್ತುತ ತಮ್ಮ ನಟನೆಯಿಂದ ಗಂಗೂಬಾಯಿ ಕಥಿಯಾವಾಡಿ ಚಿತ್ರದ ಮೂಲಕ ಸಿನಿ ರಂಗದಲ್ಲಿ ಸಖತ್‌ ಯಶಸ್ಸು ಕಾಣುತ್ತಿದ್ದಾರೆ. ಇನ್ನು ಶೀಘ್ರದಲ್ಲಿ ನಟಿ ಆಲಿಯಾ ಭಟ್‌ ಸ್ಟಾರ್‌ ನಟ ರಣಬೀರ್‌ ಕಪೂರ್‌ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.
ಇದರ ನಡುವೆ ಇಂದು ಆಲಿಯಾ ತಮ್ಮ ಮುಂದಿನ ಚಿತ್ರ ಬ್ರಹ್ಮಾಸ್ತ್ರ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಪರಿಚಯಿಸಿದ್ದಾರೆ. ರಣಬೀರ್‌ ಗೆ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿರುವ ಆಲಿಯಾ, ಇಶಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಸಣ್ಣ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ 2022ರ ಸೆ.9ರಂದು ರಿಲೀಸ್‌ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!