Sunday, July 3, 2022

Latest Posts

ಉಗುರಿನ ಒಳಗೆ ಜೀವಂತ ಮೀನು.. ‘ಮೀನಿಗೆ ಹಿಂಸೆ ಕೊಡ್ತೀರಾ’ಎಂದ ನೆಟ್ಟಿಗರು… ವಿಡಿಯೋ ವೈರಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಹೆಣ್ಣುಮಕ್ಕಳ ನೇಲ್ ಆರ್ಟ್ ಪ್ರತಿದಿನವೂ ಟ್ರೆಂಡಿಂಗ್ ಆಗುತ್ತಲೇ ಇರುತ್ತದೆ. ಈ ಬಾರಿ ನೇಲ್ ಆರ್ಟ್‌ನ ಇನ್ಸ್ಟ್ರಾಗ್ರಾಂ ವಿಡಿಯೋ ಒಂದು ವೈರಲ್ ಆಗಿದೆ.
ಇದರಲ್ಲೇನು ವಿಶೇಷ ಗೊತ್ತಾ? ಈ ನೇಲ್ ಆರ್ಟ್‌ಗೆ ನಿಜವಾದ ಮೀನನ್ನು ಬಳಸಲಾಗಿದೆ. ಪ್ರಾಣಿಪ್ರಿಯರು ಈ ವಿಡಿಯೋ ನೋಡಿ ಮೀನಿಗೆ ಹಿಂಸೆಯಾಗ್ತಿದೆ ಎಂದರೆ ಫ್ಯಾಶನ್ ಪ್ರಿಯರು ಕ್ರಿಯೇಟಿವ್ ನೇಲ್ ಆರ್ಟ್ ಎಂದು ಹೊಗಳಿದ್ದಾರೆ.
ಈ ವಿಡಿಯೋದಲ್ಲೇನಿದೆ ?
ಮೊದಲು ನಾರ್ಮಲ್ ನೇಲ್ ಆರ್ಟ್‌ಗೆ ಬೇಕಾಗುವಂತೆ ಉಗುರನ್ನು ಪಾಲಿಶ್ ಮಾಡಲಾಗುತ್ತದೆ. ನಂತರ ಚೀಲದಂತ ಉಗುರನ್ನು ಅಳವಡಿಸಲಾಗುತ್ತದೆ. ಇದರೊಳಗೆ ಜೀವಂತ ಮೀನನ್ನು ಬಿಡಲಾಗುತ್ತದೆ.
ಸದ್ಯಕ್ಕೆ ಈ ವಿಡಿಯೋ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು, ಮುಂದೇನಾಗುತ್ತದೋ ಕಾದುನೋಡಬೇಕಿದೆ.

https://www.instagram.com/p/CPBaNA8o3xJ/?utm_source=ig_embed&ig_rid=09797381-1c79-480b-a136-f0cdad8374ed

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss