Tuesday, August 16, 2022

Latest Posts

ಸಮುದ್ರದಲ್ಲಿ ತೇಲಿಬಂತು ಬಾಟಲಿಗಳು: ವಿದೇಶಿ ಮದ್ಯ ಎಂದು ಕುಡಿದ ಮೀನುಗಾರರು.. ಮುಂದೇನಾಯ್ತು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಮುದ್ರದಲ್ಲಿ ದ್ರವ ತುಂಬಿದ ಬಾಟಲಿಗಳು ತೇಲಿ ಬಂದಿದ್ದು, ಅದು ಮದ್ಯ ಎಂದು ತಿಳಿದು ಕುಡಿದ ಮೂವರು ಮೀನುಗಾರರು ಮೃತಪಟ್ಟಿದ್ದಾರೆ.
ತಮಿಳುನಾಡಿನ ರಾಮೇಶ್ವರದಲ್ಲಿ ಘಟನೆ ನಡೆದಿದ್ದು, ವಿದೇಶಿ ಮದ್ಯ ಎಂದು ತಿಳಿದು ಮೀನುಗಾರರು ಸೇವಿಸಿದ್ದಾರೆ.
ಅಂಥೋನಿಸ್ವಾಮಿ, ಅರೋಕಿಯಾ ಪ್ರೋಹಿತ್ ಹಾಗೂ ವಿನೋದ್ ಕುಮಾರ್ ಮೃತರು.
ಈ ಮೂವರು ಮೀನು ಹಿಡಿಯಲು ಬೋಟ್‌ನಲ್ಲಿ ಸಮುದ್ರಕ್ಕೆ ತೆರಳಿದ್ದ ವೇಳೆ ದೂರದಲ್ಲಿ ಮದ್ಯದ ಬಾಟಲಿ ರೀತಿ ಕಾಣುತ್ತಿದ್ದ ಬಾಟಲಿಗಳನ್ನು ನೋಡಿದ್ದಾರೆ. ಇದು ವಿದೇಶಿ ಮದ್ಯ ಎಂದು ಭಾವಿಸಿ ಕುಡಿದಿದ್ದಾರೆ. ತಕ್ಷಣ ಅಸ್ವಸ್ಥಗೊಂಡಿದ್ದು, ದಡಕ್ಕೆ ಕರೆತರಲಾಗಿದೆ. ಆ ವೇಳೆಗೆ ಇಬ್ಬರು ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss