Saturday, August 13, 2022

Latest Posts

ಅಭಿವೃದ್ಧಿಗೊಂಡಿರುವ ಹೆಬ್ಬಾಳು ಕೆರೆಯಲ್ಲಿ ಮೀನುಗಳ ಸಾವು

ಹೊಸದಿಗಂತ ವರದಿ, ಮೈಸೂರು:

ನಗರದ ಹೆಬ್ಬಾಳ ಕೆರೆಯಲ್ಲಿ ಮೀನುಗಳು ಸಾವಿಗೀಡಾಗಿರುವ ಘಟನೆ ಶನಿವಾರ ನಡೆದಿದೆ.
ಸಿಎಸ್‌ಆರ್ ಹಣದಿಂದ ಇನ್ಫೋಸಿಸ್ ಸಂಸ್ಥೆ ಈ ಕೆರೆಯನ್ನು ಅಭಿವೃದ್ಧಿಪಡಿಸಿ, ಅದರಲ್ಲಿದ್ದ ನೀರನ್ನು ಶುದ್ಧೀಕರಣಗೊಳಿಸಿತ್ತು. ಅಲ್ಲದೇ ಸಂಸ್ಥೆಯ ಕೆರೆ ನಿರ್ವಹಣಾ ತಂಡವು ಕೆರೆಗೆ ಸಾವಿರಾರು ಮೀನುಗಳನ್ನು ಕೆರೆಗೆ ಬಿಟ್ಟಿತ್ತು. ಕೆರೆಯಲ್ಲಿ ಮೀನುಗಳನ್ನು ಬಿಟ್ಟಿರುವ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ತಿಳಿಸಲಾಗಿತ್ತು. ಸಚಿವರು ಸಹ ಕೆರೆಗೆ ಭೇಟಿ ನೀಡಿ ವೀಕ್ಷಿಸಿದ್ದರು.

ಇದಾದ ಮಾರನೇ ದಿನವಾದ ಇಂದು ಕೆರೆ ದಡದಲ್ಲಿ ಮೀನುಗಳು ಸತ್ತು ಬಿದ್ದಿರುವುದು ಕಂಡುಬAದಿದೆ. ಸತ್ತಿರುವ ಮೀನುಗಳಿಂದ ವಿಪರೀತ ವಾಸನೆ ಬರುತ್ತಿದ್ದು, ವಾಯುವಿಹಾರ ಮಾಡುತ್ತಿರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಈ ಕೆರೆಗೆ ಕಲುಷಿತ ನೀರು ಸೇರಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss