Monday, August 8, 2022

Latest Posts

ಗೋವಾಕ್ಕೆ ಎಂಟ್ರಿ ನೀಡಲು ಕೇರಳಿಗರಿಗೆ ಐದು ದಿನ ಕ್ವಾರೆಂಟೀನ್ ಕಡ್ಡಾಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇರಳದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿದ್ದಂತೆ ಗೋವಾ ಸರ್ಕಾರ ಎಚ್ಚೆತ್ತುಕೊಂಡಿದೆ.
ಕೇರಳದಿಂದ ಗೋವಾ ಪ್ರವಾಸಕ್ಕೆ ಬರುವವರಿಗೆ ಐದು ದಿನಗಳ ಕ್ವಾರೆಂಟೀನ್ ಕಡ್ಡಾಯವಾಗಿದೆ.
ಜೊತೆಗೆ ಸೆ.20ರವರೆಗೆ ರಾಜ್ಯಾದ್ಯಂತ ಕರ್ಫ್ಯೂ ಮುಂದುವರಿಯಲಿದೆ.  ಕೆಸಿನೋ ಮತ್ತಿತರ ಚಟುವಟಿಕೆಗಳ ಮೇಲೆ ಈಗಲೂ ನಿರ್ಬಂಧ ಇದೆ ಎಂದು ಸರ್ಕಾರ ಹೇಳಿದೆ. ಮೋಜು ಮಸ್ತಿಗಾಗಿ ಗೋವಾಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಅಲ್ಲಿನ ಜನರ ಹಿತದೃಷ್ಟಿಯಿಂದ ಕೇರಳಿಗರಿಗೆ ಗೋವಾ ಸರ್ಕಾರ ಐದು ದಿನ ಕ್ವಾರೆಂಟೀನ್ ಕಡ್ಡಾಯ ಮಾಡಿದೆ.
ಪ್ರವಾಸಕ್ಕೆಂದು ಬರುವವರು ಗೋವಾಗೆ ಪ್ರವೇಶಿಸದೆ ವಾಪಾಸಾಗಿದ್ದಾರೆ. ಇನ್ನು ಗೋವಾದಲ್ಲಿ ನೆಲೆಸಿದ್ದ ಕೇರಳಿಗರು ಐದು ದಿನಗಳ ಕ್ವಾರೆಂಟೀನ್ ಪೂರೈಸುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss