ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪೀತ್‌ಬೈಲಿನಲ್ಲಿ ಎಎನ್‌ಎಫ್ ನವರು ನಡೆಸಿದ ಎನ್ ಕೌಂಟರ್ ನಲ್ಲಿ ವಿಕ್ರಂ ಗೌಡ ಹತನಾಗಿದ್ದಾನೆ. ಇನ್ನುಳಿದಂತೆ ಐದಾರು ನಕ್ಸರ್ ಇರುವ ಶಂಕೆ ವ್ಯಕ್ತವಾಗಿದ್ದು, ಅವರಿಗಾಗಿ ಕಬ್ಬಿನಾಲೆಯ ಪಿತ್ತಬೈಲ್ ನಲ್ಲಿ ಎನ್ಎಫ್ಐ ಶೋಧ ಕಾರ್ಯ ನಡೆಸಲಿದೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ಡಿ.ರೂಪಾ ಹೇಳಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,ವಿಕ್ರಂ ಗೌಡನಿಗಾಗಿ ನವೆಂಬರ್ 10ರಿಂದಲೂ ಶೋಧ ನಡೆಸುತ್ತಿದ್ದೆವು. ವಿಕ್ರಂ ಗೌಡನ ಸಾವಿನೊಂದಿಗೆ ಇದು ರಾಜ್ಯದಲ್ಲಿ ನಡೆದ 4ನೇ ಎನ್ಕೌಂಟರ್ ಆಗಿದೆ ಎಂದು ಹೇಳಿದರು.
ಇನ್ನೂ 5-6 ಜನ ನಕ್ಸಲರು ಇದ್ದಾರೆ, ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ನಕ್ಸಲರಿಗಾಗಿ ನಿರಂತರವಾಗಿ ಶೋಧ ನಡೆಸುತ್ತೇವೆ. ನಕ್ಸಲರ ಶರಣಾಗತಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.