ಪ್ರತಿಕೂಲ ವಾತಾವರಣದಿಂದ ಡಬಲ್‌ ಇಂಜಿನ್ ವಿಮಾನ ಪತನ: ಐದು ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾಣಿಜ್ಯೇತರ, ಟ್ವಿನ್ ಇಂಜಿನ್ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಐವರು ಸಾವನ್ನಪ್ಪಿರುವ ಘಟನೆ ಅರ್ಕಾನ್ಸಾಸ್‌ನ ಪುಲಾಸ್ಕಿ ಕೌಂಟಿಯಲ್ಲಿ ಸಂಭವಿಸಿದೆ. ಅರ್ಕಾನ್ಸಾಸ್ ಟೈಮ್ಸ್ ವರದಿಯ ಪ್ರಕಾರ, ಬಿಲ್ ಮತ್ತು ಹಿಲರಿ ಕ್ಲಿಂಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ಸ್ವಲ್ಪ ಸಮಯದ ನಂತರ ಅವಳಿ ಎಂಜಿನ್ ವಿಮಾನವು ಪತನಗೊಂಡಿದೆ.

ಓಹಿಯೋದ ಕೊಲಂಬಸ್‌ನಲ್ಲಿರುವ ಜಾನ್ ಗ್ಲೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನವು ಪತನಗೊಂಡಿದ್ದು, ವಿಮಾನದಲ್ಲಿ ಲಿಟಲ್ ರಾಕ್ ಮೂಲದ ಸಲಹಾ ಸಂಸ್ಥೆಯಾದ CTEH ನ ಉದ್ಯೋಗಿಗಳು ಇದ್ದರು ಎಂದು ಕಂಪನಿ ತಿಳಿಸಿದೆ. ಅವಳಿ ಎಂಜಿನ್ ವಿಮಾನ ಪತನಗೊಂಡಾಗ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ ಎಂದು ಲಿಟಲ್ ರಾಕ್ ಮೂಲದ ಪರಿಸರ ಸಲಹಾ ಸಂಸ್ಥೆ ದೃಢಪಡಿಸಿದೆ. ವಿಮಾನ ನಿಲ್ದಾಣದಿಂದ ಕೇವಲ ಎರಡು ಮೈಲಿ ದೂರದಲ್ಲಿ ವಿಮಾನ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ-ವಾಯುವ್ಯದಿಂದ ಬಲವಾದ ಗಾಳಿಯೊಂದಿಗೆ ತುಂತುರು ವೇಗವಾಗಿ ಪೂರ್ವದ ಕಡೆಗೆ ಚಲಿಸುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ ಎಂದು ಹವಾಮಾನಶಾಸ್ತ್ರಜ್ಞ ಜೇಮ್ಸ್ ಬ್ರ್ಯಾಂಟ್ ಹೇಳಿದ್ದಾರೆ. ವಿಮಾನ ಹಾರಾಟದ ಸಮಯದಲ್ಲಿ ಗಾಳಿಯು 56 MPH ವೇಗದಲ್ಲಿ ಬೀಸುತ್ತಿತ್ತು. ಫೆಡರಲ್ ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ ಅವಳಿ ಎಂಜಿನ್ ಅಪಘಾತ ಹೇಗೆ ಸಂಭವಿಸಿತು ಎಂದು ತನಿಖೆ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!