ಅಮೆರಿಕದ ನೈಟ್‌ಕ್ಲಬ್ ಮೇಲೆ ಗುಂಡಿನ ದಾಳಿ: ಐವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಕೊಲೊರಾಡೋ ಸ್ಟ್ರಿಂಗ್ಸ್‌ನ ನೈಟ್‌ಕ್ಲಬ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಐವರು ಮೃತಪಟ್ಟಿದ್ದಾರೆ. ಎಲ್‌ಜಿಬಿಟಿಕ್ಯು ನೈಟ್‌ಕ್ಲಬ್‌ನಲ್ಲಿ ದಾಳಿ ನಡೆದಿದ್ದು, 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಸಂಜೆ ದಾಳಿ ನಡೆದಿದೆ. ಶಂಕಿತ ದಾಳಿಕೋರನನ್ನು ಆಂಡರ್ಸನ್ ಲೀ ಆರ್ಲ್ಡಿಚ್ ಎಂದು ಗುರುತಿಸಲಾಗಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನ ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕ್ಲಬ್ ಕ್ಯೂ ಎಂದೇ ಕರೆಯಲಾಗುವ ಈ ಕ್ಲಬ್, ವಯಸ್ಕ ಆಧಾರಿತ ಸಲಿಂಗಕಾಮಿ ಮತ್ತು ಲೆಸ್ಬಿಯನ್ ನೈಟ್‌ಕ್ಲಬ್ ಎಂದು ಹೆಸರುವಾಸಿಯಾಗಿದೆ. ಈ ಬಗ್ಗೆ ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿ ಬರೆದುಕೊಂಡಿದೆ. ಇದು ದ್ವೇಷದ ದಾಳಿ ಎನ್ನಲಾಗುತ್ತಿದ್ದು, ದ್ವೇಷಕ್ಕಾಗಿ ಹೀಗೆಲ್ಲಾ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕ್ಲಬ್‌ನಲ್ಲಿ ದಾಳಿಯ ಬಗ್ಗೆ ಮಧ್ಯರಾತ್ರಿಗಿಂತ ತುಸು ಮುನ್ನ ಪೊಲೀಸರಿಗೆ ಆರಂಭಿಕ ಕರೆ ಬಂದಿತ್ತು ಎಂದು ಪೊಲೀಸ್ ವಕ್ತಾರ ಪಮೇಲಾ ಕ್ಯಾಸ್ಟ್ರೋ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!